Die Abhängigen
ಅಹಲ್ಯ ಬಂದಾಗ ನಾನು ಕಿಟಕಿಯಿಂದ ರಸ್ತೆ ನೋಡುತ್ತ ನಿಂತಿದ್ದೆ.
Als Ahalya in unsere Nachbarschaft ankam, betrachtete ich durch das Fenster die Ereignisse in der Straße.
ಅಹಲ್ಯ ಎದುರು ಮನೆ ಮಗುವಾಡಿಸಲು ಬಂದ ಹುಡುಗಿ.
Ahalya kam in das Nachbarhaus, um das kleine Kind im Haus bei Frau Sharada zu betreuen.
ಹದಿನೈದು ವರ್ಷವಿರಬಹುದು. ಮಸಿಕೆಂಡ. ಎತ್ತರಕ್ಕೆ ಮೈ ಕೈ ತುಂಬಿಕೊಂಡಿತ್ತು. ಮುಖದಲ್ಲಿ ಭೂಮಿಯನ್ನು ಗೋಲಿ ಮಾಡಿ ಆಡುವ ಉತ್ಸಾಹವಿತ್ತು.
Das nette Mädchen ist etwa 15 Jahre alt und sehr süß. Ihre Hautfarbe: rabenschwarz. Sie ist gross und gesund. Ich stellte mir vor, sie sei so fleißig, als ob sie die Erde in einen Spielglobus umwandeln und damit Ball spielen würde!
ಅಹಲ್ಯ ಬರೀ ಮಗುವಾಡಿಸುವ ಕೆಲಸ ಮಾತ್ರವಲ್ಲ. ಮನೆ ಕೆಲಸವೆಲ್ಲ ಮಾಡುತ್ತಾಳೆ.
Nicht nur um den Buben kümmerte sich Ahalya, sondern auch um den Haushalt.
ಒಂದು ಸಲ ಹೇಳಿದರೆ ಸಾಕು. ಮತ್ತೆ ಹೇಳುವುದೇ ಬೇಡ. ಬಹಳ ಹುಶಾರು ಉಂಟು ಹುಡುಗಿ.
Es war genug, wenn man ihr einmal befahl, etwas zu besorgen. Es würde gleich getan werden – so fleissig war sie.
ಅವಳು ಬಂದದ್ದು ನಂಗೆ ಜೀವವೇ ಬಂದ ಹಾಗೆ. ದುಡ್ಡು ಖರ್ಜಾದರೂ ಅಡ್ಡಿಲ್ಲಪ್ಪ ಎಂದಳು ಶಾರದೆ. ಕೆಲಸಕ್ಕೆ ಹೋಗುವ ಶಾರದೆಗೆ ಅಹಲ್ಯ ಬಂದ ಮೇಲೆ ತುಸು ಕಳೆ ಏರಿತ್ತು.
Ihre Hausfrau Sharada sagte einst zu mir:‚Ich fühle mich, als ob ich wieder ins Leben gerufen bin!‘ Sharada, eine berufstätige Frau, fühlte sich nach der Ankunft des Mädchens so erleichtert, dass sich ihr Gesicht ein wenig erhellte.
ಈಗೀಗ ಮಗು ಅಳುವುದು ಅಷ್ಟು ಕೇಳುತ್ತಿರಲಿಲ್ಲ.
Kaum hörte man in den letzten Tagen das Weinen des Kindes.
ಹುಡುಗಿ ಆಹಲ್ಯಳ ಮುಖದಲ್ಲಿ ಒಳ್ಳೆಯ ಯಜಮಾನಿಕೆ ಇತ್ತು. ಮಗುವಿಗೆ ಸ್ನಾನ ಎಷ್ಟು ಚನ್ನಾಗಿ ಮಾಡಿಸುತ್ತಿದ್ದಾಳೆ. ನೀನೇ ಬಂದು ನೋಡು ಬೇಕಾದರೆ ಎಂದಳು ಶಾರದೆ.
Am Gesicht des Mädchens sah man das Zeichen einer Übergeordneten. ‚Wie gut sie das kleine Kind beim Waschen pflegt! Wenn du das sehen möchtest, kannst du hierher kommen,‘ sagte Sharada.
ಒಮ್ಮೆ ಬೆಳಿಗ್ಗೆ ಹತ್ತು ಗಂಟೆಯ ಹೊತ್ತಿಗೆ ಹೋಗಿ ನೋಡಿದರೆ ಮಗುವಿಗೆ ಎಣ್ಣೆ ಹಾಕಿ ತಿಕ್ಕಿ ಕಾಲು ನೀಡಿ ಕುಳಿತು ಲಂಗವನ್ನು ಮಂಡಿಯ ವರೆಗೆ ಎತ್ತರಿಸಿಕೊಂಡು ಯಾಕಳುವೆ ಎಲೆ ಮುದ್ದೂ ಎಂತ ಹಾಡುತ್ತ ಅದರ ಸ್ನಾನಕ್ಕೆ ಅಣಿಯಾಗಿದ್ದಳು ಅಹಲ್ಯ.
Es war gegen 10 Uhr. Als ich mich dahin bewegte, sah ich, dass Ahalya auf dem Boden mit gestreckten Beinen sass. Sie hatte ihren Rock bis zum Knie gehoben und dem Kind ein Volkslied singend die Haare mit Haarwasser bestreut und war gerade dabei, es gründlich zu waschen.
ಹಣೆಗೆ ಎಡಗೈ ಅಡ್ಡವಿರಿಸಿ ಬಲಗೈಯಿಂದ ತಲೆಗೆ ಶ್ಯ್ ಎಂದು ನೀರು ಸುರಿದಾಗಲಂತೂ ಅವಳಿಂದ ದೃಷ್ಟಿ ತೆಗೆಯಲಿಲ್ಲ ನಾನು.
Sie schützte das Gesicht des Kindes mit ihrer linken Hand und goss ihm warmes Wasser um den Körper mit der rechten und wusch das Kind gründlich, während sie das Geräusch des Wassers mit ihren Lippen imitierte. Ich konnte lange meine Augen aus der Szene nicht ablenken.
ಅಜ್ಜಿ ಅಮ್ಮ ಎಲ್ಲರೂ ಇದ್ದಾರೆ ಅಲ್ಲಿ ಎನಿಸಿತು. ನಾಕೆಮ್ಮೆ ಕರೆದಾ ನೊರೆಹಾಲೂ ಎಂದು ಅವಳು ಹಾಡುವ ಧಾಟಿಯೂ ಓಬಿರಾಯನದು.
Dabei sang sie auch das alte Großmutter Lied, 'Nakemme kareda norehalu' (schäumende Büffelmilch von vier Büffeln) als wäre sie selbst eine echte Großmutter oder eine echte Mutter.
ಆ ದನಿಗೇ ಮಗು ನಿದ್ದೆ ಮಾಡಬೇಕು.
Der Stil des Singens war altmodisch, aber konnte das Kind in den Schlaf gleiten lassen.
ಅಮ್ಮ ಹೇಳುತ್ತಿದ್ದಳು. ಮಕ್ಕಳ ಹತ್ತಿರ ಹಾಡುವಾಗ ರಾಗ ಅವಕ್ಕೆ ಅರ್ಥವಾಗಬೇಕು. ಹಾಗೆ ಹಾಡಬೇಕು. ಅದೆಲ್ಲ ಯಾರು ಹೇಳಿಕೊಟ್ಟು ಬರುವುದಲ್ಲ. ತಾಯಿಯಾದಾಗ ಮೊಲೆಯಲ್ಲಿ ಹಾಲು ಬರುವಂತೆ ಸ್ವರದಲ್ಲಿ ರಾಗವೂ ಹೊರಡುತ್ತದೆ ಎಂತ.
Mama sagte zu mir, wenn man bei einem Kind singt, soll es den Sinn gleichzeitig verstehen. Solch eine Fähigkeit lässt sich nicht beibringen. Wie die Muttermilch im Busen auf natürliche Weise fließt, dem Gesang folgt der richtige Ton.
ಅಮ್ಮನ ತಾದಾತ್ಮ್ಯತೆ ಅಂಥದಿರಬಹುದು. ಆದರೆ ಈ ಹುಡುಗಿ ಇನ್ನೂ ತಾಯಿಯಾಗಿಲ್ಲ. ಆದರೆ ಸ್ವರದಲ್ಲಿ ಆಗಲೇ ರಾಗ ಮೂಡಿತ್ತು.
Es kann sein, dass eine Mutter natürlich so achtsam ist. Aber dieses Mädchen ist noch keine Mutter. Trotzdem war in ihrer Stimme schon der richtige Ton.
ಸ್ನಾನಕ್ಕೆ ಕರೆದುಕೊಂಡು ಹೋಗುವ ಮುಂಚೆಯೇ ತೊಟ್ಟಿಲಿಗೆ ಬಟ್ಟೆ ಹಾಕಿ ರೆಡಿ ಮಾಡಿಟ್ಟಿದ್ದಳು ಅಹಲ್ಯ.
Sie hatte schon in der Wiege die notwendigen Decken ausgebreitet.
ಬಿಸಿ ಬಿಸಿ ಮಗುವನ್ನು ಎತ್ತಿಕೊಂಡು ಬಂದದ್ದೇ ಕೊಡು ಮಾರಾಯ್ತಿ ನಾನು ಪೌಡರು ಹಾಕಿ ತಲೆಗೆ ಬಟ್ಟೆ ಕಟ್ಟುತ್ತೇನೆ ಎಂದರೂ ಕೊಡದೇ ತಾನೇ ಪೌಡರು ಬಡಿದು ತಲೆಗೆ ಬಿಳಿ ಬಟ್ಟೆ ಕಟ್ಟಿ ತೊಟ್ಟಿಲಲ್ಲಿ ಮಲಗಿಸಿ ಅಚ್ಚುಕಟ್ಟಾಗಿ ಹೊದೆಸಿ ಬೀಸಿ ತೂಗತೊಡಗಿದಳು.
Als Ahalya dabei war, das mit Waschen erwärmte Baby in die Wiege zu legen, sagte ich, „Lass es mich mit Puder schminken und ihm das Kopftuch anbinden.“ Sie benahm sich, als ob sie mich gar nicht hörte, schminkte das Baby selbst, band ihm ein sauberes Kopftuch um, legte es in die Wiege, deckte es gut zu und fing an, die Wiege zu schaukeln.
ಎಷ್ಟು ಹಾಡಿತೋ ಹುಡುಗಿ. `ದತ್ತಾತ್ರಿ ಹುಟ್ಟೂ' ಹೇಳಿತು. ಬಿಸಿ ನೀರಿಗೆ ಮಗುವಿನ ಕಣ್ಣು ಒಳಗೆ ಬರುತ್ತಲೇ ಬಾಡಿ ಹೋಗಿತ್ತು. ಈಗಂತೂ ಗಾಢ ನಿದ್ರೆ. ಆದರೂ ಅಹಲ್ಯನ ಹಾಡು ನಿಂತಿರಲಿಲ್ಲ.
Keiner weiß, wie lange sie es tat. Sie sang noch ein Lied, ‚Dattatri‘. Selbst schon nach dem Waschen waren seine Augenbrauen abgesunken. Bald lag es in tiefem Schlaf. Trotzdem hörte das Singen des Mädchens nicht auf.
ಅವಳ ಅಂಗಿಯಿಂದ ನೀರು ಅರತುತ್ತಿತ್ತು. ಅಹಲ್ಯನ ಹಾಡು ನಿಂತಿರಲಿಲ್ಲ. ಮಿಂದದ್ದು ನೀನ ಮಗುವ ಎಂದೆ. ನಾನೀಗ ಮೀಯುವವಳೇ ಎಂದು ನಕ್ಕಿತು. `ನೀನು ಲಕಿ ಶಾರದ. ಸಿಕ್ಕಿತಲ್ಲ ಅಂತೂ ಒಂದು ಒಳ್ಳೆಯ ಹುಡುಗಿ'
Von ihrem Kleid fielen noch Wassertropfen. Sie sang aber immer noch weiter. Ich fragte sie, wer schon gewaschen war, sie oder das Baby. Sie lächelte und sagte, sie sei gerade dabei sich zu waschen. Ich sagte Sharada, sie sei sehr sehr glücklich, sie habe eine fleißige Babysitterin bekommen.
ಮೆಲ್ಲಗೆ ಎಂದದ್ದಕ್ಕೆ `ಬಂದ ಹೊಸತಲ್ಲನ? ಮಾಡುತ್ತದೆ. ಮುಂದೆ ಹೇಗೆಂತ ಗೊತ್ತುಂಟ? ಇವರು ಆಗಲೇ ಹೇಳಿಯಾಯಿತು. ಮಾಡಿಸುವುದನ್ನೆಲ್ಲ ಮಾಡಿಸಿಕೋ. ಮತ್ತೆ, ಮುಂದೆ ಕೆಲಸ ಹೇಳಿದರೆ ಸಿಟ್ಟು ಮಾಡಿಕೊಂಡೀತು ಎಂತ. ನನಗೆ ಹೊರಗೆ ಕೆಲಸ ಮಾಡಿ ಸಾಕಾಗುತ್ತದೆ ನೋಡು' ಎಂದಳು ಶಾರದೆ.
„Ist sie nicht neu angekommen? Sie ist gerade so eifrig. Warte und sieh, was später aus ihr wird. Mein Mann hat schon zu mir gesagt, ‚Lass sie schon jetzt alles machen, was du willst, später wird sie sich vielleicht ärgern, wenn du ihr befiehlst, etwas zu tun.‘ Siehst du, ich bin nach den Arbeitsstunden ganz erschöpft“, sagte Sharada.
ಸ್ವಲ್ಪ ಹೊತ್ತು ಮಾತಾಡುತ್ತ ಕುಳಿತಿದ್ದು ನಾನು ಹೊರಟೆ. ಬರುವುದ ಅಹಲ್ಯ ಎಂದಾಗ ಹುಡುಗಿ ಜೆಸ್ಸೂರು ಹಣೆಗೆಯಿಂದ ತಲೆಯನ್ನು ಗೆರಚಿ ಬಾಚಿಕೊಳ್ಳುತ್ತ ಬಾಗಿಲ ಬಳಿ ಕೂತಿತ್ತು.
Nachdem ich eine Weile mit Sharada geschwätzt hatte, machte ich mich auf dem Weg nach Haus. Sich die Haare mit einem Jessur-Kamm kämmend, saß Ahalya an der Tür. Ich sagte ihr ‚Tschüss‘.
ಏನು ಇಷ್ಟು ಬೇಗ? ಮನೆಗೇನು ಎರಡು ಮೈಲುಂಟ? ಕೂತುಕೊಳ್ಳಿ?’ ಎಂದಿತು. ಹೆಣ್ಣಿಗೆ ಸ್ವಲ್ಪ ಅಧಿಕ ಇದೆ ಎಂತ ಶಾರದೆ ಹೇಳಿದ್ದು ನೆನಪಾಗಿ ನಗೆ ಬಂತು.
"Warum sind Sie in so einer Eile? Sollten Sie zwei Stunden nach Hause laufen? Bleiben Sie bitte noch eine Weile!" Ich erinnerte mich an die Worte von Sharada, das Mädchen wage zu viel zu reden, und lächelte.
ಅದರ ಬಾಯಿಗೆ ಕೋಲು ಹಾಕುವ ಅಂತೆನಿಸಿ `ಮನೆ ಹತ್ತಿರವಿದ್ದರೆ? ಅಡಿಗೆಯಾಗುವುದು ಬೇಡವ? ಇನ್ನೂ ಮೇಲೋಗರಕ್ಕೇ ಕತ್ತರಿಸಿಲ್ಲ ನಾನು' ಎಂದೆ.
Ich wollte Ahalya ein wenig necken. „Was ist, wenn ich ganz in der Nähe wohne? Ich habe noch nicht die Gemüse für das Mittagessen geschnitten.“
`ಅಡಿಗೆ ನನ್ನದೂ ಆಗಿಲ್ಲ. ನಿಮ್ಮ ಮನೆಯಲ್ಲಿ ಏನು ಮೇಲೋಗರ ಮಾಡುತ್ತೀರಿ ಇವತ್ತು?' ಇದು ದೊಡ್ಡ ಅಜ್ಜಿಯೇ - ಮೇಲೋಗರ ಇಂಥದ್ದು ಎಂತ ಹೇಳಿದೆ.
„Ich auch nicht. Was für Gerichte werden Sie zum Mittagessen kochen?“ fragte mich Ahalya als sei Sie schon eine Großmutter, dachte ich. Ich erklärte ihr, was ich kochen werde.
ನಮ್ಮ ಮನೆಯಲ್ಲಿ ಏನಡಿಗೆ ಮಾಡುವುದೆಂತ ಇನ್ನೂ ಯೋಚಿಸಿಯೂ ಇಲ್ಲ ಅಂತ ತನ್ನ ಅಡಿಗೆಯ ತಲೆಬಿಸಿ ಹೇಳುತ್ತಿರುವಾಗ ನಾನು ದಾಟಿಕೊಂಡೆ. ಶಾರದೆಗೆ ಹೋಗಿ ಬರುತ್ತೇನೆ ಎನ್ನಲು ಪುನಃ ಹಿಂದಿರುಗಿ ನೋಡಿದಾಗ ಶಾರದೆ ಅಹಲ್ಯೆಗಿಂತ ತುಂಬ ಚಿಕ್ಕವಳಾಗಿ ಅಹಲ್ಯೆ ಶಾರದೆಯ ಅಮ್ಮನೋ ಅತ್ತೆಯೋ ಅಜ್ಜಿಯೋ ಆಗಿ ಕಂಡು ಶಾರದೆ ಅವಳ ರಕ್ಷಣೆಯಲ್ಲಿ ಮುಚ್ಚಟೆಯಾಗಿರುವಂತೆ ಕಂಡಿತು.
Während sie noch beim Nachdenken über das Kochen war, kam ich nach Haus. Es fiel mir auf, Sharada wirkte viel kleiner als Ahalya. Ahalya sah so aus, als wäre Sie schon Sharadas Mutter oder Schwiegermutter oder sogar ihre Großmutter. Ich stellte mir vor, Sharada selbst ist ganz sicher unter dem Schutz von Ahalya.
ಮನೆಗೆ ಬಂದಾಗ ನನ್ನ ಕೆಲಸಗಳೆಲ್ಲ ನನ್ನನ್ನೇ ಕಾಯುತ್ತ ಬಿದ್ದಿದ್ದವು. ನನಗೊಂದು ಅಹಲ್ಯ ಸಿಕ್ಕಿದ್ದರೆ? ಇಷ್ಟೊತ್ತಿಗೆ ಎಲ್ಲ ಕೆಲಸ ಮುಗಿದು ವತ್ತರೆ ಕೂಡ ಆಗಿಬಿಡುತ್ತಿತ್ತು.
Als ich zu Hause ankam, warteten alle meinen Haushaltspflichten noch darauf, von mir erledigt zu werden. Wie schön wäre es, wenn ich selbst ein Dienstmädchen wie Ahalya hätte? Bis zu dieser Zeit hätte sie alle Aufgaben fertig gemacht, alles wieder sauber gemacht und alles wieder in Ordnung gebracht.
ಆದರೆ ಶಾರದೆ ಅಹಲ್ಯೆಯನ್ನು ಮಗುವಾಡಿಸುವುದಕ್ಕೆಂತ ಕರೆಸಿದ್ದಲ್ಲವೆ? `ತಿಂಗಳಿಗೆ ಹತ್ತು ರೂಪಾಯಿ ವರ್ಷಕ್ಕೆ ಒಂದು ಜೊತೆ ಬಟ್ಟೆ. ಇರುವುದು ಮೈ ನೆರೆಯುವವರೆಗೆ ಮಾತ್ರ. ಆಮೇಲೆ ಬೇಡ. ಎಲ್ಲಿಯಾದರೂ ಒಂದು ಹುಡುಗಿ ಇದ್ದರೆ ಗೊತ್ತು ಮಾಡಿ ಕೊಡುತ್ತೀಯ?' ಎಂತ ನನ್ನ ಹತ್ತಿರವೂ ಹೇಳಿದ್ದಳು.
Aber hatte Sharada das Mädchen nicht angestellt, damit sie das Baby betreuen sollte? „Sie bekommt von mir jedes Jahr zehn Rupien* als Gehalt. Dazu schenke ich ihr zwei ‚Saris‘ bis sie zur Frau wird. Sobald sie mit ihren Perioden beginnt, werde ich sie wieder nach Hause schicken. Kannst du mir dann eine andere Babysitterin besorgen?" fragte sie mich.
ತಿಂಗಳಿಗೆ ಹತ್ತು ರೂಪಾಯಿ ಕೊಟ್ಟರೆ ಯಾರು ಬರುತ್ತಾರನ ಈಗೆಲ್ಲ ಎಂದರೆ, ಬರೀ ಮಗುವಾಡಿಸುವುದಕ್ಕೆ ಇನ್ನು ಎಷ್ಟು ಕೊಡುತ್ತಾರೆ ಎಂದಳು. ಬಂದ ಸಂಬಳವನ್ನೆಲ್ಲ ಗಂಟೇ ಕಟ್ಟು ನೀನು ಎಂತ ತಮಾಷೆ ಮಾಡಿದ್ದೆ.
„Wer würde heutzutage für 10 Rupien im Jahr ein Kind betreuen?“ fragte ich bedauerlich. „Mit wie viel Geld würde man lediglich das Kinderhüten belohnen?“ fragte sie. Ich machte mich über sie lustig. „Du kannst ja dein ganzes Gehalt sparen und es auf der Bank gedeihen lassen.“
ಈ ಹುಡುಗಿಗೆ ಎಷ್ಟು ಸಂಬಳ ಅಂತ ಒಮ್ಮೆ ಕೇಳಿದ್ದಕ್ಕೆ “ನಿನ್ನೊಡನೆ ಹೇಳುತ್ತೇನೆ. ಸುದ್ದಿ ಬೇಡ ಯಾರಲ್ಲಿಯೂ.
Als ich einmal Sharada nach dem Gehalt von Ahalya fragte, erwiderte mir Sharada, „Ich sage es nur zu dir, privat. Sprich darüber mit niemandem,” ermahnte sie mich.
“ನಿನ್ನೊಡನೆ ಹೇಳುತ್ತೇನೆ. ಸುದ್ದಿ ಬೇಡ ಯಾರಲ್ಲಿಯೂ. ಅಸಲು ಗುಟ್ಟು ಗೊತ್ತುಂಟ? ಇದು ಇನ್ನೂ ಮೈ ನೆರೆದಿಲ್ಲ. ಸೂಚಮ್ಮನಿಗೆ ಅದೇ ಚಿಂತೆ. ಇದು ಬಹುಶಃ ಆಗುವುದೇ ಇಲ್ಲವೆಂತ. ‘ಡಿ. ಎಂಡ್ ಸಿ. ಯಾದರೂ ಮಾಡಿಸಬಹುದಿತ್ತು’ ಎಂದೆ.
„Weißt du die Wahrheit, das Mädchen hat noch nicht mit ihrer Monatsblutung begonnen. Ihre Mutter Susamma ist schon deswegen besorgt. ‚Vielleicht wird diese nie zur Frau.‘ Ich sagte, das Mädel solle sich vielleicht einer Operation unterziehen.‘ ,Schön wäre es, wenn jemand dafür sorgen würde,‘ sagte Susamma zu mir.
ನನ್ನೊಡನೆ ಬರಲಿ, ನಾ ಮಾಡಿಸುತ್ತೇನೆ. ನಂಗೂ ಹೇಗೂ ಮಗು ನೋಡಿಕೊಳ್ಳಲು ಒಂದು ಜನ ಬೇಕು ಎಂದೆ. ಅಷ್ಟು ಮಾಡು ಮಾರಾಯ್ತಿ. ಮಗುವಾಡಿಸಿಯಾದರೂ ಹಣ ತೀರಿಸೀತು ಎಂದರು ಸೂಚಮ್ಮ. ಆಯಿತು ಎಂತ ಕರಕೊಂಡು ಬಂದಿದ್ದೇನೆ.
‚Lass sie zu mir kommen. Ich werde die Verantwortung übernehmen. Sowieso brauche ich eine Kinderbetreuerin,’ sagte ich. ‘Das ist ein großer Gefallen von dir. Mit dem Dienst bei Dir wird sie die Schuld begleichen.‘ Ich war einverstanden und habe das Mädchen hierher gebracht.
ಮೈ ನೆರೆದ ಮೇಲೆ ಇಟ್ಟುಕೊಳ್ಳುವುದಿಲ್ಲವಪ್ಪ. ನಂಗೆ ಒಂಥರ ಭಯ. ಯಾರನ್ನೆಂತ ಕಾಯುವುದು? ಯಾರನ್ನೂ ನಂಬುವಂತಿಲ್ಲ ಅಲ್ಲವ?”
„Sie wird hier sein bis ihre Perioden anfangen. Sobald sie zur Frau wird, werde ich sie bei mir nicht mehr wohnen lassen. Davor habe ich große Angst. Auf niemanden kann man sich heutzutage verlassen, nicht wahr?“ sagte sie.
ನಾ ಮಾತಾಡಲಿಲ್ಲ. ಅಂತಹ ಬೆಳವಣಿಗೆಯ ಅಹಲ್ಯ ಇನ್ನೂ ಆಗಿಲ್ಲವೆಂದರೆ - ಆಗುತ್ತಾಳಪ್ಪ.. ಈ ಸೂಚಮ್ಮನಿಗೆ ಅಷ್ಟು ಅವಸರ ಯಾಕೆ - ಎಂತ ಒಂದು ನಿಮಿಷ ಅನಿಸಿದರೂ ಹೀಗೆ ಅನಿಸುವ ಹಿಂದೆ ಶಾರದೆಗೊಂದು ಜನ ಒಳ್ಳೆಯದೆ ಸಿಕ್ಕಿತೆಂತ ಹೊಟ್ಟೆಕಿಚ್ಚಿಲ್ಲವಲ್ಲ ಎಂತ ನನಗೆ ನಾನೇ ಕೇಳಿಕೊಳ್ಳುವಂತಾಯಿತು.
Ich sagte nichts. Warum ist Susamma in solcher Eile? Ahalya sieht ganz normal und gesund aus. Sie wird einmal groß werden. Ich wunderte mich inzwischen, ob ich neidisch geworden bin, dass ich nicht so ein süßes Dienstmädchen wie Ahalya habe. „Sag das zu Ahalya niemals,“ ermahnte sie mich noch einmal.
`ಮತ್ತೆ ಅಹಲ್ಯನಿಗೆ ಇದೆಲ್ಲ ಹೇಳುವುದು ಬೇಡ. ಸೂಚಮ್ಮನೂ ಹೇಳಿದ್ದಾರೆ. ಅವಳಿಗೆ ತಿಳಿಯುವುದು ಬೇಡ ಅಂತ'.
„Susamma hat es mir auch gesagt. Ahalya sollte darüber nicht Bescheid wissen.“
`ಡಾಕ್ಟರರ ಹತ್ತಿರ ಟೆಸ್ಟ್ ಮಾಡಿಸೋಣ ಎಂದರೆ ಯಾಕೆ ಎಂತ ಕೇಳುವುದಿಲ್ಲವ ಅವಳು?'
„Würde sie dich nicht ‘Warum’ fragen, wenn du ihr befiehlst, sich einmal vom Arzt untersuchen zu lassen?
`ಅದಲ್ಲ ತಿಳಿಯುವುದು ಬೇಡ ಅಂದದ್ದು. ಆಪರೇಷನಿನ ಖರ್ಚು ಮತ್ತು ಇವಳು ಮಗು ನೋಡಿಕೊಂಡದ್ದು ವಜಾವಟೆಂತ ಅವಳಿಗೆ ತಿಳಿಯುವುದು ಬೇಡ ಅಂತ ನಾನು ಹೇಳಿದ್ದು.
„Sie soll nicht darüber Bescheid wissen, dass die ärztliche Behandlung durch ihren Dienst bezahlt wird. Darum sage ich, über die Kosten soll geschwiegen werden.
ಹಾಗೆಲ್ಲ ಹೇಳಿದರೆ, ಅಭಿಮಾನ ಜೋರಂತೆ ಹುಡುಗಿಗೆ, ಹೊರಡಲಿಕ್ಕಿಲ್ಲ ಎಂದರು ಸೂಚಮ್ಮ. ತಾನು ದುಡಿದು ದುಡ್ಡು ಕಳಿಸುವ ಆಫೀಸರನ ಜರ್ಬಿನಿಂದ ಬಂದಿದೆ ಹೆಣ್ಣು. ಅವಳೇನು ಕಡಿಮೆ ಎಂತ ತಿಳಿಯಬೇಡ.’
„Wenn wir ihr die Wahrheit sagen, sagt Susamma, würde sie überhaupt nicht zum Arzt gehen. Dieses Mädchen ist so erwachsen, dass sie sich so benimmt, als wäre sie schon Beamtin und als ob sie ihre Einkäufe selbst bezahlen würde. Du sollst sie nicht unterschätzen.“
ಹಿಂದೆ ಮುಂದೆ ಏನೂ ಇಲ್ಲದ ಸೂಚಮ್ಮ ಮಗಳನ್ನು ಹೀಗೆ ಕಳಿಸಿದ್ದು ಸಧ್ಯ ಉಣ್ಣಲಿಕ್ಕೊಂದು ಜನವಾದರೂ ಮನೆಯಲ್ಲಿ ಕಡಿಮೆಯಾಯಿತಲ್ಲ ಎಂತಲೂ ಹೌದು
Sharada sagte, Susamma akzeptierte ihren Vorschlag, weil ihre Tochter bei Sharada wenigstens etwas zum Essen bekommen würde.
ಎನ್ನುತ್ತ `ಈ ದೇಶದಲ್ಲಿ ಉಣ್ಣಲಿಕ್ಕೆ ಇಲ್ಲದಿದ್ದವರೇ ಗಟ್ಟಿ' - ಅಂತ ತನ್ನ ಗಂಡ ಅಹಲ್ಯಳನ್ನು ಕಂಡು ಹೇಳಿದರು ಎನ್ನುತ್ತ ನಕ್ಕಳು ಶಾರದೆ. ಅಹಲ್ಯಳನ್ನು ಕಂಡರೆ ಊಟಕ್ಕಿಲ್ಲವೆಂತ ಯಾರೂ ಹೇಳುವಂತಿರಲಿಲ್ಲವೇನೋ ಹೌದು. ಅಷ್ಟು ಗಟ್ಟಿಮುಟ್ಟಾಗಿತ್ತು ಹುಡುಗಿ.
Ihr fehlte es selbst vorne und hinten. Sie bezog sich lächelnd auf die Bemerkung ihres Mannes, in unserem Land seien die Armen im Aussehen am Besten. Doch könnte keiner sagen, Ahalya sei unterernährt. Sie sah gesund und körperlich ziemlich stark aus.
ಅಹಲ್ಯ ಬಂದು ಒಂದು ತಿಂಗಳು ಕಳೆದಿರಬಹುದು. ಈಗ ಮಗುವಿನ ತೊಟ್ಟಿಲೂ ನಡುವಿನ ಕೋಣೆಗೆ ಬಂದಿತ್ತು. ರಾತ್ರಿ ಅಹಲ್ಯ ಅಲ್ಲಿಯೇ ಮಲಗುವುದಂತೆ. ಮಗು ಎದ್ದರೆ ನೀರು ಕುಡಿಸುವುದೂ ಅವಳೇ. ತೂಗಿ ನಿದ್ರೆ ಮಾಡಿಸುವುದೂ ಅವಳೇ. ರಗಳೆ ಇಲ್ಲ ಎನ್ನುತ್ತಿದ್ದಳು ಶಾರದ.
Es muss etwa ein Monat vergangen sein, als die Wiege des Babys aus dem Schlafzimmer der Eltern ins mittlere Zimmer gebracht wurde. Es hörte sich gut an, das Baby schlief in der Wiege und Ahalya lag auf dem Boden. Wenn das Baby in der Nacht aufwachen würde, würde sie ihm Wasser zum Trinken geben, sie würde wieder bis zum Einschlafen die Wiege schaukeln. Sharada sagte, sie würden jetzt kaum mehr von dem ab und zu aufwachenden Baby gestört.
ಮಗುವಾಡಿಸಲೆಂತ ಬಂದ ಹುಡುಗಿ ಹೇಳದೆಯೆ ಅಡಿಗೆ, ಮನೆ ಗುಡಿಸಿ ಒರೆಸುವುದು, ಎಲ್ಲ ಮಾಡಬೇಕಾದರೆ ಏನು ಅದೃಷ್ಟ ಈ ಶಾರದೆಯದು! ಅಥವ ತನ್ನನ್ನು ಮಗುವಾಡಿಸುವುದಕ್ಕೆಂತ ಕರೆದುಕೊಂಡು ಬಂದು ಎಲ್ಲ ಕೆಲಸವನ್ನು ಮಾಡಿಸುತ್ತಿದ್ದಾಳೆ ಎಂತ ಗೊತ್ತಿಲ್ಲವ ಈ ಹುಡುಗಿಗೆ? ಸೂಚಮ್ಮ ಅದನ್ನೂ ಗುಟ್ಟಿನಲ್ಲಿಡು ಎಂತ ಖಂಡಿತ ಹೇಳಿರಲಿಕ್ಕಿಲ್ಲ ಶಾರದೆಗೆ-
Das Mädchen, das als Kinderbetreuerin ins Haus kam, erledigte alles: Kochen, Zimmer putzen. Das war ein großes Glück für Sharada. Oder weiß das arme Mädchen gar nicht, dass die Hausfrau sie als Babysitterin herbrachte und erst später alle Haushaltsdienste von ihr machen ließ. Susamma hätte Sharada das nicht so sagen können, dachte ich.
ತನಗೇಕೆ ಅದೆಲ್ಲ. ಬೇಡದ್ದು. ಅಹಲ್ಯೆ ಮತ್ತು ಶಾರದೆಯರ ಮಧ್ಯೆ ಛಿದ್ರ ಹುಡುಕುವ ಕೆಲಸ. ಅವಳು ಮಗುವಾಡಿಸಲಿ, ಅಡಿಗೆ ಮಾಡಲಿ - ಅಥವ ಎರಡೂ ಮಾಡದೆ ಮುಚ್ಚಿ ಹಾಕಿ ಮಲಗಲಿ. ನನ್ನ ಮನೆ ಕೆಲಸವೇನು ಕಡಿಮೆಯಾಗುತ್ತದೆಯೆ?
Warum sollte ich darum besorgt sein? Das wäre außerhalb meines Bereichs. Außerdem würde es zu einer Kluft in dem Verhältnis zwischen Ahalya und Sharada führen. Ahalya könnte mit dem Kind spielen oder kochen oder beides nicht machen und mit dem Bauch den Boden berührend liegen und faulenzen. Würde das irgendwie meine Arbeit erleichtern?
ಒಂದು ದಿನ ಮೆಟ್ಟಿಲ ಮೇಲೆ ಕೂತಿದ್ದಳು ಅಹಲ್ಯ. ಮಗುವಿಗೆ ಗುಬ್ಬಿ ಗುಬ್ಬಿ ಹೇಳಿಕೊಡುತ್ತ, `ಏನು ಹೆಣೆ ಕೆಲಸ ಆಯಿತ?' - ಎಂದೆ. `ಆಯಿತು ಕ್ಯಾರಿಯರನ್ನು ಕಳಿಸಿಯಾಯಿತು. ಅಷ್ಟರೊಳಗೆ ಈ ಮಾಣಿ ಎದ್ದಿತು' - ಎಂದಳು.
Eines Tages saß Ahalya auf der Stufe vor dem Haus von Sharada. Sie ließ das Kind die Zeilen eines Gesangs wiederholen. „Du, Ahalya, bist du fertig, mit heutiger Arbeit?“ Sie sagte, „Ja, schon. Ich habe Frau Sharada das Essenspaket abgeschickt. Gerade ist der Bube aufgewacht.“
ತಲೆಯ ಮೇಲೆ ಅಬ್ಬಲಿಗೆ ಹೂವು ಅರಳುತ್ತಿತ್ತು. ಮುಖಕ್ಕೆ ಪೌಡರು ಬಳಿದುಕೊಂಡು ಒಪ್ಪವಾಗಿ ಬಾಚಿ ಹಿಂದೆ ಒಂದು ಹೇರ್ ಬ್ಯಾಂಡ್ ಕಟ್ಟಿಕೊಂಡಿತ್ತು. `ಏನು ಭಾರಿ ಶೋಕು ಆಗಿದ್ದಿಯಲ್ಲ ಇವತ್ತು! ನೋಡಲಿಕ್ಕೆ ಬರುತ್ತಾರ ಏನು ಕತೆ?' ಎಂದೆ. ಹೆಣ್ಣು ನಾಚಿಕೊಂಡಿತು.
Auf den Haaren trug sie eine kleine Girlande von ‚Abbalige‘ Blumen, die gerade in der Blüte waren. Sie hatte ihr Gesicht ganz gut geschminkt. Die Haare hatte sie schön gekämmt und mit einem Haarband gebunden. Ich lächelte sie an. „Was, so schön hast dich heute gemacht. Kommt jemand, um dich zu interviewen?“ Sie wurde ganz scheu und ihre Wangen erröteten sich.
`ನೀವು ಬಿಡಿ ಸುಸೀಲಕ್ಕ. ಎಲ್ಲದಕ್ಕೂ ತಮಾಷೆಯೇ'. ಎಂದದ್ದು ಸ್ವಲ್ಪ ತಡೆದು `ಶಾರದಕ್ಕನ ಪೌಡರು. ಕೂದಲಿಗೆ ಸಿಕ್ಕಿಸಿಕೊಂಡದ್ದೂ ಅವರದೇ... ಹಳೆ ಜಬ್ಬು. ಚಂದ ಇಲ್ಲ ಅಲ್ಲ? ಹೊಸತು ತೆಗೆದುಕೊಳ್ಳಬೇಕು'.
„Susilakka, Sie machen sich immer lustig.“ Sie hörte eine kurze Weile auf und sagte weiter, „Das Puder und das Haarband - beide gehören Sharadakka. Das Haarband ist ganz alt. Nicht schön, stimmt es? Ich muss mir ein Neues kaufen.“
‘ಅಲ್ಲ ಹೆಣೆ, ಶಾರದಕ್ಕ ಬೈಯುವುದಿಲ್ಲವ?'
`ಯಾಕೆ ಬೈಯುತ್ತಾರೆ? ನಾನಿಷ್ಟು ಗೇಯುವುದಿಲ್ಲವ?' - ಅಡ್ಡಿಲ್ಲ. ಹೆಣ್ಣಿಗೆ ಕೆಂಚು ಜೋರುಂಟು! - ಆದರೆ ಆ ದನಿಯಲ್ಲಿ ಎಲ್ಲೋ ಒಂದು ಕಡೆ ಕಿರಿಕಿರಿಯಾಗುತ್ತಿರುವ ಸಣ್ಣ ಎಳೆಯೂ ಉಂಟೆ?... ನನಗೇ ಅನ್ನಿಸಿತು. ಶಾರದೆ ಬೈಯದಿರಲಿ ಎಂತ.
„Du, Mädel, würde dich Sharadakka nicht schimpfen?“
„Warum sollte sie mich schimpfen? Mache ich nicht alle Arbeit bei ihr?“ Oh, das Mädchen kann sich gut wehren, aber ist da nicht auch eine schlechte Laune? Ich hoffte nur darauf, Sharada würde sie nicht schimpfen.
`ಅಬ್ಬಲಿಗೆ ಯಾರು ಕೊಟ್ಟರು?'`ಆ ಕೊಂಕಣಿ ಮನೆಯವರು. ಕೇಳಿದೆ. ಕೊಟ್ಟರು. ಇನ್ನೇನು ಸೋಣೆ ತಿಂಗಳು ಬರುತ್ತದೆ. ಚೂಡಿಯನ್ನೂ ಕೊಡುತ್ತಾರೆ ಬೇಕಾದರೆ. ಒಳ್ಳೆಯ ಜನ'.
`ಅಡ್ಡಿಲ್ಲ ಮಾರಾಯ್ತಿ ನೀನು!' - ಎಂದೆ.
`ಪುಸ್ಸೆ -- ಇದಕ್ಕೆಲ್ಲ ಏನಾಗಬೇಕು? ಅಬ್ಬಲಿಗೆ ಬೇಕ ನಿಮಗೆ? ಶಾರದಕ್ಕನಿಗೆಂತ ಒಂದು ತುಂಡು ಇಟ್ಟಿದ್ದೇನೆ. ಬೇಕಾದರೆ ನಿಮಗೆ ಕೊಡುತ್ತೇನೆ'.
„Wer hat dir die Blumen gegeben?“
„Die von der Konkani-Familie. Ich habe sie darum gebeten und sie haben mir die Blumen geschenkt. Im Sona-Monat würden sie mir auch Chudi* schenken, wenn ich nur bitten würde. Nette Leute.“
– „Sehr klug bist du schon. Nichts zu klagen!“
– „ Möchten Sie solche Blumen? Da ist noch ein Stück Girlande, aufbewahrt für Sharadakka. Das würde ich Ihnen geben, wenn Sie wollen.”
`ನಂಗೆ ಬೇಡಪ್ಪ. ಅವಳಿಗೇ ಕೊಡು'.
ಸ್ವಲ್ಪ ಕಾಲ ಮೌನ. ಮತ್ತೆ ತಗ್ಗಿದ ದನಿಯಲ್ಲಿ ಕೇಳಿದಳು ಅಹಲ್ಯ `ಸುಸೀಲಕ್ಕ, ನನಗೊಂದು ಒಳ್ಳೆಯ ಹೇರ್‌ಬ್ಯಾಂಡ್ ತೆಗೆಸಿಕೊಡುತ್ತೀರ? ನನಗೆ ತಿಂಗಳು ಸಂಬಳ ಬಂದ ಮೇಲೆ ಒಂದು ದಿನ ಪೇಟೆಗೆ ಹೋಗಿ ಬರುವ'.
„Die will ich nicht. Gib sie doch ihr!“
Schweigen für eine Weile. Dann sagte sie mir ganz flüsternd, „Könnten Sie mir ein gutes Haarband besorgen? Wenn ich mein Gehalt bekomme, werden wir zusammen zum Einkaufen gehen.“
ನನಗೆ ಮಾತು ಹೊರಡಲಿಲ್ಲ. ಸಂಬಳವಲ್ಲ. ನಿನ್ನ ಕರ್ಮ. ಒಂದು ವೇಳೆ ನಾನು ತೆಗೆಸಿಕೊಟ್ಟೆನೆಂದೇ ಇಟ್ಟುಕೊಳ್ಳೋಣ,
ನಿನ್ನ ಶಾರದಕ್ಕ ತನ್ನ ಕೆಲಸದವಳನ್ನು ನಾನು ಪೂಸಿ ಹೊಡೆದು ಹಾರಿಸಲು ಪ್ರಯತ್ನಿಸುತ್ತೇನೆಂದು ಎಣಿಸಲಿ ಕಡೆಗೆ...
`ಶಾರದಕ್ಕನ ಹತ್ತಿರವೇ ಹೇಳು. ಆಫೀಸಿನಿಂದ ಬರುವಾಗ ತಂದುಕೊಡುತ್ತಾಳೆ' - ಎಂದು ಮಾತ್ರ ಹೇಳಿದೆ.
Mir fehlte eine Antwort. Das Mädel denkt immer noch an sein Gehalt, wie dumm!
Auch wenn ich ihr eins kaufen würde, würde Sharada sagen, ich versuche, ihr Dienstmädchen zu mir zu ziehen.
„Bitte Sharadakka selbst darum. Sie würde dir eins auf dem Weg nach Hause kaufen.“
`ಹೂಂ, ತಂದು ಕೊಡುತ್ತಾರೆ, ಮತ್ತೇನಲ್ಲವ? ಅವರು ಬರುವುದರೊಳಗೆ ನಾನು ಜಡೆ ಕಟ್ಟಿಕೊಂಡು ಮುಖ ತೊಳೆದುಕೊಂಡಿರಬೇಕು' - ಎಂದಳು ಗೊಣಗಿದಂತೆ. ಅವಳ ಮುಖ ಕಂಡು ಸಂಕಟವಾಯಿತು.
„Sie würde mir eins kaufen? Das ist unmöglich. Bevor sie zurückkommt, muss ich mir das Gesicht rein waschen und die Haare wieder ins Zopf binden.“ Das hörte sich wie eine Klage. Mir tat es weh.
`ಆಯಿತು, ತೆಗೆಸಿಕೊಡುತ್ತೇನೆ' - ಎಂದೆ. ಮೊದಲೇ ಗೆರಸಿಯಂತೆ ಅಗಲ ಮುಖ. ಈಗ ಕೆನ್ನೆಯೆಲ್ಲಿ ಬಾಯಿಯೇ. ಬಾಗಿಲ ಚಿಲಕ ಸಿಗಿಸಿ ನಮ್ಮ ಮನೆ ಬಾಗಿಲಲ್ಲೇ ಬಂದು ನಿಂತಳು.
„Einverstanden. Ich lasse dir eins kaufen,“ sagte ich. Ihr Gesicht erblühte. Erstaunt öffnete sich ihr Mund. Ihr Gesicht strahlte. Sie schloß die Haustür und begleitete mich bis zu meiner Tür.
`ಊಟವಾಯಿತನ?' - ಎಂದೆ.
`ಇಲ್ಲಪ್ಪ. ಈಗ ಮಗು ಬಿಡುವುದಿಲ್ಲ. ನಿದ್ದೆ ಮಾಡುವ ಹೊತ್ತು. ಅದು ನಿದ್ದೆ ಮಾಡಿದ ಮೇಲೆಯೇ ಉಂಡರೆ ಹಿತವಾಗುತ್ತದೆ'.
„Hast du schon gegessen?“ fragte ich.
„Nein, noch nicht. Jetzt lässt mich das Kind nicht. Erst nach seinem Essen ist es mir angenehm, ruhig zu essen.“
ಕೇಳಬೇಕೆಂತ ಅನಿಸಿ ಅನಿಸಿ ಬೇಡವೆಂತ ತಳ್ಳಿದ ಪ್ರಶ್ನೆಯನ್ನು ನಿಧಾನವಾಗಿ ಕೇಳಿದೆ.
`ಹೌದನ? ರಾತ್ರಿ ಮಗು ನಿನ್ನ ಹತ್ತಿರವ ಮಲಗುವುದು?'
Eine Frage, die zu stellen ich früher gezögert hatte, wagte ich erst jetzt zu stellen.
„Du, Ahalyachen, schläft das Kind nachts bei dir?“ Eine freche Frage.
ಹೂಂ. ಮಾಣಿ ಹೆಚ್ಚು ಹಟ ಮಾಡುವುದಿಲ್ಲ. ನಾಲ್ಕೈದು ಸಲ ಏಳುತ್ತದೆ ಅಷ್ಟೆ. ಮೊನ್ನೆ ಗೊತ್ತುಂಟ ಸುಸಿಲಕ್ಕ. ಅದರ ಹೊದಿಕೆ ಆಚೀಚೆ ಆಗಿತ್ತೋ ಏನೊ. ಉಚ್ಚಿ ತೊಟ್ಟಿಲಿಂದ ಹೊರಗೆ ಹಾರಿ ನನ್ನ ಕಣ್ಣು ಮುಖದ ಮೇಲೆಲ್ಲ. ಅಯ್ಯೋ ರಾಮಾ...' ಹುಡುಗಿ ಬಿದ್ದು ಬಿದ್ದು ನಕ್ಕಿತು.
“Ja, das stört mich nicht sehr. Nur vier- oder fünfmal wacht er auf. Wissen Sie, Susilakka, was vorgestern passierte?
Seine Decke war vielleicht beiseite gerutscht; auf einmal sprühte er seinen Urin auf meine Augen und mein Gesicht. Mein Gott, mein Gott.” Das Mädel brach in unkontrolliertes Lachen aus.
ಪ್ರೀತಿಯಿಂದ ಮಗುವಿನ ತಲೆ ನೇವರಿಸಿ `ಅಷ್ಟು ಗೊತ್ತಾಗುವುದಿಲ್ಲ ನಿಂಗೆ ಅಲ್ಲ ಮಣಿ?' ಎಂತ ಹೂವಿನಂತಹ ಪೆಟ್ಟು ಕೊಟ್ಟಿತು. ಶಾರದೆ ಒಂದು ದಿನ ಹೀಗೆ ಮಗುವನ್ನು ಕೊಂಗಾಟ ಮಾಡಿದ್ದನ್ನು ನಾನು ಕಂಡಿರಲಿಲ್ಲ. `ಹಾಗಾದರೆ ನಿನ್ನ ಶಾರದಕ್ಕನಿಗೆ ಒಳ್ಳೆಯ ನಿದ್ರೆ ಎನ್ನು’... ಎಂದೆ ಕೆಟ್ಟ ಬುದ್ಧಿಯಿಂದ. ತುಸು ಗಂಭೀರವಾಗಿ ಹುಡುಗಿ `ಗಂಡ ಹೆಂಡತಿಗೆ ಒಳ್ಳೆ ನಿದ್ದೆಯೇ. ಫ್ಯಾನು ಹಾಕಿಕೊಂಡು ಮಲಗಿದವರು ಗಂಟೆ ಏಳಾದರೂ ಏಳುವುದಿಲ್ಲ'.
Liebevoll streichelte sie den Buben. „Du verstehst das alles nicht, stimmt's?“ sagte sie und schlug das Kind sanft, wie mit einem Blumenblatt. Ich habe selbst noch nicht gesehen, dass Sharada den Buben so sanft streichelt wie Ahalya.
Dann sagte ich nochmal frech, „Dann schläft deine Sharadakka ganz gut, die ganze Nacht.“ Ahalya sagte ziemlich ernst: „Das Ehepaar genießt einen guten Schlaf. Bei der Ventilator-Luft stehen die beiden nicht vor 7 Uhr auf.“
ಒಳ್ಳೆ ಮಾಯಿಯಂತೆ ಆಡಿದ ಅವಳ ಮಾತು-ಗಳನ್ನು ನಾನು ಬೆಕ್ಕಸ ಬೆರಗಾಗಿ ಕೇಳಿದೆ. ಈ ಹೆಣ್ಣಿನೆದುರು ಕಷ್ಟವೇ ಎಂತ ಅನಿಸಿತು. ಆದರೂ ಅವಳು ನನಗೆ ಆತ್ಮೀಯವಾಗುತ್ತ ಇದ್ದಳು.
Mit Verwunderung hörte ich ihre Worte wie von einer erwachsenen Frau.
Ich hatte das Gefühl, es wäre schwer, mit diesem Mädchen umzugehen. Trotzdem wurde sie mir lieb.
ಕೆರಳಿಸಲೆಂದೇ ಕೇಳಿದೆ `ಫ್ಯಾನು, ನೀನು ಮಲಗುವಲ್ಲಿ ಇಲ್ಲವನ?' - ನಂಗೆ ಬೇಡದ್ದು. `ಅಲ್ಲಿರುವುದು ಫ್ಯಾನಲ್ಲ. ನುಸಿ. ತೊಟ್ಟಿಲಿಗೆ ನುಸಿಪರದೆ ಉಂಟು ಅದೊಂದು ಬಚಾವು. ಅಲ್ಲ. ಶಾರದಕ್ಕನ ಪ್ಲಾನು ಸಮನೇ. ಮಾಣಿ ಎದ್ದರೆ ನುಸಿ ನನ್ನನ್ನ ಎಬ್ಬಿಸುತ್ತದೆಯಲ್ಲ!’, ಹಲ್ಲು ಬಿಟ್ಟು ನಕ್ಕಿತು ಹುಡುಗಿ.
Mit dem Wunsch, sie zu ärgern, fragte ich, „Du hast keinen Ventilator, wo du schläfst?“ “Da ist kein Ventilator, da sind Moskitos. Da ist zum Glück ein Moskitonetz für die Wiege. Der Bub ist gut geschützt vor dem Moskitostich. Sehen Sie, Sharadakka plant gut. Wenn das Kind aufwacht, wecken mich die Moskitos auf.” Sie lachte herzlich.
`ಹೌದೌದು, ನಿಂಗೆ ಫ್ಯಾನು ಬೇರೆ ಹಾಕುತ್ತಾರೆ ಮತ್ತೆ. ಅಲ್ಲ ಹೆಣೆ, ನೀನೇನೆಂತ ತಿಳಿದೆ? ಅದೆಲ್ಲ ಪುಗಸಟ್ಟೆ ಬರುತ್ತದೆ ಎಂತಲ?'
„Man besorgt dir einen Ventilator, denkst du? Wahnsinn! Denkst du, Ventilatoren sind umsonst zu bekommen?“
`ಪುಗಸಟೆ ಬರುವುದು ಯಾವುದಿಲ್ಲ. ಹಾಗೆ ನೋಡಿದರೆ ಮನುಷ್ಯನೇ' - ಎಂದಳು. ಆಗಲೇ ಬಂದು ಮೂರು ತಿಂಗಳು ದಾಟಿತ್ತು. ಬಹುಶಃ ಇವಳು ನಿರೀಕ್ಷಿಸಿದಂತೆ ಸಂಬಳ ಕೈಗೆ ಬಂದಿಲ್ಲ. ಪಾಪದ್ದು.
„Nichts ist unbezahlt zu bekommen, vielleicht nur noch der Mensch!“ sagte Ahalya. Drei Monate sind schon vergangen. Vielleicht hat sie ihr Gehalt nicht bekommen, worauf sie sich gefreut hatte. Das arme Mädchen!
ಶಾರದೆ ಹೇಳಿದ್ದೆಲ್ಲ ಹೇಳಿಬಿಡುವ ಅನ್ನಿಸಿತು. ಆದರೆ ಹಾಗೆ ಅನಿಸುವುದು ಮಾತ್ರ. ಹೇಳಿದರೆ ನಾನು ಶಾರದೆಯನ್ನು ಬಿಟ್ಟುಕೊಟ್ಟಂತಾಗುವುದಿಲ್ಲವೆ? - ನಾಲಗೆ ಹಿಂಜರಿಯಿತು. ಇಷ್ಟಕ್ಕೂ ಅವಳು ಸುಮ್ಮನೆ ಆಡಿರಬಹುದು. ಆಡಿದ್ದು ಮಾತಿನ ಭರ ಅಷ್ಟೆ. ಅವಳು ಮಗುವಿನಲ್ಲಿ ಮಗ್ಗವಾಗಿದ್ದಳು.
Ich wollte ihr fast sagen, was mir Sharada über ihr Gehalt gesagt hatte. Aber das wäre ein Verrat ihr gegenüber. Meine Zunge zögerte, das zu sagen. Vielleicht hat Ahalya ihre Worte nicht ernst gemeint. Sie hat das nur so gesagt, in der Eile ihres Sprechens. Beim Spielen mit dem Kind hatte sie alles wieder vergessen.
ಮಾಣಿಯ ಹೊಟ್ಟೆಯ ಮೇಲೆ ಬಾಯಿ ಇಟ್ಟು ಪರ‍್ರ್ ಅಂತ ಶಬ್ದ ಮಾಡಿದಳು. ಮಗು ಕೇಕೆ ಹಾಕಿ ನಕ್ಕಿತು. `ನೋಡಿ ನೋಡಿ ಸುಸಿಲಕ್ಕ, ಇದರ ನಗೆ! ಛೆ! ಇದೊಂದು ಇದ್ದರೆ ಪ್ರಪಂಚ ಬೇಡ'.
Sie pustete auf den Bauch des Kindes mit ihrem Mund und stellte ein merkwürdiges Geräusch her. Das Kind lachte heftig. Sehen Sie Susilakka, wie gut der Kleine lacht. Dabei könnte ich die ganze Welt vergessen."
ನನಗೆ ಅಹಲ್ಯಳನ್ನು ನೋಡುವುದೇ ಆಯಿತು. ಸುಮಾರು ಹೊತ್ತು ಆಟ ಆಡಿಸಿ ಮಗುವಿನ ಕಣ್ಣು ಮುಚ್ಚುತ್ತ ಬಂದಾಗ `ಹೋಗುತ್ತೇನೆ, ಅದಕ್ಕೆ ನಿದ್ರೆ ಬರುತ್ತಿದೆ. ನಾನುಂಡು ಸಾಯಂಕಾಲದ ತಿಂಡಿ ಎಂತದು ಎಂತ ನೋಡಬೇಕು. ಅವರು ಬರುವುದರೊಳಗೆ ಮಾಡಿಡದಿದ್ದರೆ ಇಬ್ಬರ ಮುಖ ಗುಮ್ಮ' - ಅಭಿನಯಿಸುತ್ತ ಅವಳು ಹೇಳಿದ ಧಾಟಿ ಕಂಡು ನನಗೆ ನಗೆ ತಡೆಯಲಿಲ್ಲ.
Die Zeit verging, während ich den Buben betrachtete. Als sie eine ganze Weile mit ihm gespielt hatte, war er schläfrig. Aufgrund der Schläfrigkeit schlossen sich seine Augenlider, sagte sie zu mir, "Er ist dabei, einzuschlafen. Nach dem Essen muss ich über den Abendimbiss nachdenken. Wenn er nicht rechtzeitig fertig ist, werden die beiden böse mit mir.” Als sie das mit ihren Gesten zeigte, schien es mir ganz lustig.
ಶಾರದೆಯ ಮೇಲೆ ಅವಳಿಗೆ ಸಮಾಧಾನವಿಲ್ಲ ಎಂತ ಸ್ಪಷ್ಟವಾಗುತ್ತ ಇತ್ತು. ಆದರೆ ಬಹುಶಃ ನನ್ನ ಮನೆಯಲ್ಲಿ ಅವಳು ಇದ್ದಿದ್ದರೆ ನನ್ನ ಮೇಲೆಯೇ ಸಮಾಧಾನವಿರುತ್ತಿರಲಿಲ್ಲವೇನೋ. ಜೊತೆಗೇ ಇದ್ದರೂ ಅರ್ಥವಾಗದೇ ಇರುವವರು ಮನುಷ್ಯರು ಮಾತ್ರ.
Allmählich fiel es mir auf, sie ist ganz unzufrieden mit Sharada. Vielleicht wäre sie selbst mit mir unzufrieden, nach einiger Zeit. Es passiert so vielleicht nur bei Menschen. Die Menschen können sich nicht gut verstehen, auch wenn sie zusammen wohnen.
ಈಗ ಶಾರದೆಗೆ ಎಷ್ಟು ಗಮ್ಮತು! ಸಂಜೆ ನಮ್ಮ ಮನೆಗೆ ಬಂದು ಒಣ ಪಟ್ಟಾಂಗಕ್ಕೆ ಕುಳಿತು ಬಿಡುತ್ತಾಳೆ. ನನ್ನ ಕೆಲಸ ಅಲ್ಲಲ್ಲೆ. ಮಾರಾಯ್ತಿ ನಿನಗೆ ಜನವಿದೆ. ನನಗೆ ಇಲ್ಲ. ನಿಂಗೇನು ಎಂತ ಲಘುವಾಗಿ ಬೈಯ್ದರೆ `ಸಾಕು ಸಾಕು. ನಿಂಗೇನು ಇಡೀ ದಿನ ಮನೆಯಲ್ಲಿರುತ್ತಿ. ಮಲಗಿ ಎದ್ದು ಕೆಲಸ ಮುಗಿಸಬಹುದು. ನನ್ನ ಹಾಗ? ನಾನು ಹೋದ ಮೇಲೆ ನಿಧಾನವಾಗಿ ಮಾಡು' - ಎನ್ನುತ್ತಿದ್ದಳು.
Wie sehr freut sich Sharada über ihre neu gewonnene Freizeit! Abends kommt sie zu mir und bleibt stundenlang bei mir zum Reden. Meine Aufgaben bleiben. Deswegen schimpfe ich sie leicht , “Du hast jetzt alles ganz leicht. Du hast eine gute Hilfskraft, ich habe ja keine.”
‘ಹತ್ತು ರೂಪಾಯಿಗೆ ಯಾರು ಬರುತ್ತಾರೆ’ ಎಂದೆ ನೀನು ಸುಶೀಲಕ್ಕ. ಈಗ ನೋಡು, ‘ಹತ್ತು ರೂಪಾಯಿಯೂ ಇಲ್ಲದೆ ಮಾಡುತ್ತಿಲ್ಲವ ಅವಳು? ಇಷ್ಟು ಮನೆಯಂತನೆ ಊಟ ಅಂಥವರಿಗೆ ಎಲ್ಲಿ ಸಿಗುತ್ತದೆ? ಅವಳು ಮಾಡಿದ್ದು. ತಿಂದದ್ದು'.
“Du hattest mich einmal gefragt, wer für zehn-Rupien-Gehalt als Kinderbetreuerin arbeiten würde? Jetzt sieh, auch ohne Gehalt arbeitet sie ganz fleißig. Wo würde sie sonst so gute Nahrungsmittelsicherheit bekommen? Sie kann kochen und essen, ganz nach ihrem Wunsch!"
`ಅವಳನ್ನು ಡಾಕ್ಟರರ ಹತ್ತಿರ ಪರೀಕ್ಷೆ ಮಾಡಿಸಬಹುದಿತ್ತು' - ನಾನು ನಿಧಾನವಾಗಿ ಅಂದೆ.
Ich sagte ganz leise zu ihr, “Du hättest sie einmal ärztlich untersuchen lassen sollen.”
ಮಾಡಿಸಬೇಕು. ಹೋಗಬೇಕು ಸಮಯ ಆದಾಗ. ಮಾರಾಯ್ತಿ. ಅವಳು ಊರಿಗೆ ಹೋದರೆ ನಂಗೆ ಕಷ್ಟವೇ. ಅವಳನ್ನು ಕಳಿಸುವುದು ಹೌದ ಅನಿಸುತ್ತದೆ ಒಮ್ಮೊಮ್ಮೆ'.
`ಹೌದಪ್ಪ. ಅಹಲ್ಯನ ಮಟ್ಟಿಗೆ ಮಾತಿಲ್ಲ'
"Stimmt, wenn ich dazu komme, muss ich das tun! Wenn sie wieder nach Hause zurückzieht, habe ich es ganz schwer. Manchmal frage ich mich, würde ich ohne sie überhaupt auskommen?" "Bezüglich Ahalya stimmt es ganz und gar."
“ಹೂಂ - ನಾನು ಹೀಗೆಂದದ್ದು ಆಗಲಿಲ್ಲ. ಶಾರದೆಯ ನಾಲಗೆ ತಿರುಗು ಕುರ್ಚಿಯಂತೆ ತಿರುಗಿಯಾಯಿತು. `ಅಷ್ಟೆಲ್ಲ ಹೇಳುವುದು ಬೇಡ. ಅದರೊಡನೆ ನಾ ಪಡುವ ಕಷ್ಟ ನಂಗೇ ಗೊತ್ತು. ಅಲ್ಲನ. ಹೊಟ್ಟೆಗಿಲ್ಲದೆ ಬಂದದ್ದು, ಅದಕ್ಕೆ ತಾನೆಲ್ಲಿಂದ ಬಂದದ್ದು ಎಂಬುದೇ ಮರೆತು ಹೋಗಿದೆ.
Das hätte ich nicht sagen sollen. Sharadas Ton kehrte sich um, "Sag das doch nicht! Nur ich weiß, wie schwer es ist mit ihr zusammen zu arbeiten. Sie kam, ohne etwas zum Essen zu haben. Das hat sie jetzt alles vergessen.
ಈಗ. ಸಿನೆಮಕ್ಕೆ ಸೇರುವಷ್ಟು ತಯಾರಾಗಿದೆ ಗೊತ್ತುಂಟ? ನನ್ನ ಪೌಡರು, ಕ್ರೀಮು, ಐಬ್ರೋ ಪೆನ್ಸಿಲು, ಕಾಡಿಗೆ, ಹೇರ್ಬ್ಯಾಂಡ್ ಎಲ್ಲ ಮುಟ್ಟುತ್ತದೆ. ನಂಗೆ ಗೊತ್ತಾಗುವುದಿಲ್ಲ ಅಂತ ಅದರ ಮನಸ್ಸಿನಲ್ಲಿ. ನಂಗೆ ಗೊತ್ತಾಗದೆ! ಇನ್ನು ನಾಲ್ಕು ದಿನ ನೋಡುತ್ತೇನೆ. ಆ ಮೇಲೊಂದು ದಿನ ರಾವು ಜಪ್ಪಿ ಕೊಡಲಿಕ್ಕುಂಟು'.
Sie ist schon bereit, zur Filmaufnahme zu gehen. Sie nimmt alles, was mir gehört: mein Puder, meinen Kamm, mein Haarband. Sie denkt, ich weiß nichts davon. Ich weiß alles. Ein paar Tage werde ich noch warten. Dann werde ich sie durchaus kontrollieren."
`ಏ ಬೇಡವ. ಬೈಯ ಬೇಡ. ಮತ್ತೆ ಬೇರೆ ಏನುಂಟು ಅದಕ್ಕೆ?'
`ಅದು ನಿನ್ನ ಮನೆಯಲ್ಲಿರಬೇಕಿತ್ತು. ಆಗ ತಿಳಿಯುತ್ತಿತ್ತು. ನಾ ಹೇಳಿದರೆ ನಿಂಗೆ ನಾನೇ ಕೆಟ್ಟವಳೆಂತ ಕಾಣುತ್ತದೆ ಅಲ್ಲ?'
“Nein, tu das bitte nicht. Was hat sie sonst überhaupt noch?”
“Sie hätte bei dir gewesen sein sollen. Dann hättest du es selbst erfahren können. Wenn ich es dir sage, denkst du, ich erfinde alles."
`ಹಾಗಲ್ಲನ. ನೀನು ಅದರೊಂದಿಗೆ ಜಗಳಕ್ಕೆ ನಿಲ್ಲುವುದ ಎಂತ ಅಷ್ಟೆ'
"Nein, nein, so meinte ich es nicht. Ich frage nur, warum du dich mit ihr streiten solltest."
`ನಿಲ್ಲದಿದ್ದರೆ ಮನೆ ತನ್ನದು ಎಂದೀತು ಅದು. ಮಾ ಅಧಿಕದ್ದು. ಗೊತ್ತುಂಟ? ಊಟವಾದರೂ ಸಣ್ಣದೆಂತ ಮಾಡಿದೆಯ? ನಮಗಿಬ್ಬರಿಗಾದರೆ ಒಂದು ಪಾವು ಅಕ್ಕಿ ಸಾಕು. ಈಗ ಎರಡು ಪಾವು ಬೇಕು.
"Ansonsten würde sie das ganze Haus in Besitz nehmen. Sie ist ganz störend. Und wie viel sie auf dem Boden sitzend frisst? Uns genügt ein kleines Maß Reis. Dieses Gespenst braucht zweimal so viel.
ಬಂದ ಸಮಯವಂತೂ ಹುಡುಗಿ ಎಷ್ಟು ಬಡಿಸಿದರೂ ಹೂಂ ಇಲ್ಲ ಹ್ಞಾಂ ಇಲ್ಲ. ಈಗ ನಾನು ಬಡಿಸಲಿಕ್ಕೇ ಹೋಗುವುದಿಲ್ಲ. ಮಧ್ಯಾಹ್ನ ಹೇಗೂ ನಾನಿರುವುದಿಲ್ಲ. ಆದರೂ ಊಟ ಮುಂಚಿನಷ್ಟು ದೊಡ್ಡದಿಲ್ಲ ಅಂತ ಕಾಣುತ್ತದೆ. ಸ್ವಲ್ಪ ಮಜ್ಜಿಗೆ ಮೊಸರು ಎಂತ ಹೊಟ್ಟೆಯಲ್ಲಿ ತಂಪು ಹುಟ್ಟಿರಬೇಕು.
„Als sie zum ersten Mal zu uns kam, hätte sie beim Essen nie gesagt, ‚es reicht mir.‘ Alles, was man anbietet, wird sofort fertig gegessen. Heutzutage bediene ich sie nicht mehr. Beim Mittagessen bin ich sowieso nicht zu Hause. Doch, ich denke, so viel isst sie nicht mehr wie früher. Einen Bärenhunger hat sie jetzt nicht mehr. Ein bisschen Joghurt oder Buttermilch ist immer zum Essen vorhanden.
ಅಥವಾ ನಾನು ಆಫೀಸಿಗೆ ಹೋದಾಗ ಹಾಲೂ ಬಗ್ಗಿಸಿ ಕುಡಿಯುತ್ತದೆಯೋ ಯಾರು ಬಲ್ಲ? ಕುಡಿದಷ್ಟು ನೀರು ಬೆರೆಸಿಟ್ಟರೆ ನನಗೆ ಹೇಗೆ ಗೊತ್ತಾಗಬೇಕು?
„Wer weiß, wenn sie aus dem Milchtopf ein wenig Milch stiehlt? Um das geheim zu halten, braucht man nur ein bisschen Wasser in den Topf zu geben. Wenn der Milchstand im Milchtopf nicht absinke, könnte niemand denken, dass da etwas nicht stimmt.
ಎಣ್ಣೆ ಇಲ್ಲದೆ ಹುಡುಗಿ ಊಟಕ್ಕೆ ಕೈ ಕುತ್ತುವುದಿಲ್ಲ. ತುಪ್ಪ ಹಾಕಿದರೆ ಆದೀತು ಎಂತ ಉಂಟು. ನಾ ಜರಿಸುತ್ತೇನೆ ಈಗ. ಬಿಸಿ ನೀರು ಗೀರು ಕಂಡ ಜೀವ ಅಲ್ಲ ನೋಡು. ಸ್ನಾನಕ್ಕೆ ಇಳಿದರೆ ಒಂದು ಗಂಟೆ ಬರಿ ನೀರು ಹೊಯ್ದುಕೊಳ್ಳುವುದೇ ಶಬ್ದ.
„Ohne etwas Öl würde ihr der Reis gar nicht schmecken. Lieber hätte sie einen Tropfen Butterfett. Heutzutage serviere ich das Öl selbst. Sie hat doch auch keine Erfahrung vom Körperwaschen mit Warmwasser. Jetzt musst du die sie beim Körperwaschen anhören: sie wäscht sich, eine Stunde lang. Man hört, dass sie während der ganzen Zeit Wasser über sich gießt.
ಮಗುವಿನ ಯೋಚನೆಯೊಂದಿಲ್ಲದೆ ಆಫೀಸಿಗೆ ಹೋಗಬಹುದಲ್ಲ ಎಂತ ಇಟ್ಟುಕೊಂಡಿದ್ದೇನೆ ಅಷ್ಟೆ’.
Ich lasse sie bei mir bleiben, weil ich mich nicht mehr um das Baby kümmern muss.“
- ಅವತ್ತೊಂದು ದಿನ ಅಹಲ್ಯ ಮನೆಯ ಪಾಗಾರದ ಮೇಲೆ ಮಗುವನ್ನು ಕೂರಿಸಿಕೊಂಡು ಕಣ್ಣೊರಸುತ್ತ ನಿಂತದ್ದು ಒಳಗಿಂದ ಶಾರದೆಯ ದೊಡ್ಡದನಿ ಅಸ್ಪಷ್ಟವಾಗಿ ಕೇಳಿಸುತ್ತಿದ್ದದ್ದು ನಾನು `ಎಂತ ಹೆಣೆ' ಎಂದು ಕೈಸನ್ನೆ ಮಾಡಿ ಕೇಳಿದಾಗ ಏನಿಲ್ಲ ಎಂಬಂತೆ ಮುಖ ಅಲ್ಲಾಡಿಸಿ ಮೂಗೊರಸಿಕೊಂಡು, ಮಗುವನ್ನು ಮುಖಕ್ಕೆ ಒತ್ತಿಕೊಂಡು ಒಳಗೆ ಹೋದದ್ದು ಎಲ್ಲ ನೆನಪಾಯಿತು.
Eines Tages sah ich, wie Ahalya sich an die Wand ihres Gartens lehnte, sie ließ das Kind auf der Wand sitzen, seufzte und wischte sich die Augen ab. Hörbar war das Schimpfen ihrer Hausfrau im Inneren des Hauses, aber nicht verständlich. Mit Zeichen fragte ich nach dem Grund ihrer Tränen. Darauf drehte sie ihr Gesicht weg, wischte auch heimlich die Nase ab und ging ins Haus, noch dazu das Kind ihrem Gesicht nahe tragend. Das alles fiel mir jetzt ein.
`ಶಾರದೆ, ಅವಳು ಊಟವನ್ನಾದರೂ ಹೊಟ್ಟೆ ತುಂಬ ಉಣ್ಣಲಿ ಬಿಡು' - ಎನ್ನಬಹುದಿತ್ತು ನಾನೀಗ. ಆದರೆ ಶಾರದೆಗೆ ನಾನು ಏಕೆ ಹೆದರುತ್ತೇನೆ? ಏಕೆ ಹೆದರುತ್ತೇನೆ?
Ich hätte Sharada sagen sollen, “Du. Sharada, lass das Kind wenigstens ihren Magen voll essen! Aber ich habe Angst vor Sharada. Warum? Warum?
- ಆಫೀಸಿಗೆ ಹೋಗುವಾಗ ಎಣ್ಣೆ ತುಪ್ಪ ಹಾಲು ಬೆಣ್ಣೆ ತಿಂಡಿ ಎಲ್ಲ ಬೀಗದಲ್ಲಿ ಇಟ್ಟು ಹೋಗುತ್ತಾರೆ ಎಂತ ಹೇಳಿದ್ದಳು ಅಹಲ್ಯ ಒಮ್ಮೆ. ಗಂಟಲು ಕಟ್ಟಿ ಬಂದಿತ್ತು ಅವಳಿಗೆ.
Ahalya hatte mir einmal weinend gesagt, “Wenn Sharadakka zum Büro geht, legt sie alles in den Schrank und schließt ihn ab.
`ನಂಗೆ ಅದನ್ನೆಲ್ಲ ಉಂಡು ಗೊತ್ತಿಲ್ಲ ಹೌದು. ಆದರೆ ಬೀಗದಲ್ಲಿಟ್ಟು ಬಂದೋ ಬಸ್ತು ಮಾಡುವಷ್ಟು ನಾನು ಕಳ್ಳಿಯಲ್ಲ. ಒಂದು ವೇಳೆ ಉಂಡರೂ ಏನಾಯಿತೀಗ ಸುಸಿಲಕ್ಕ? ನಾನಿವರ ಮನೆಯಲ್ಲಿ ರಟ್ಟೆ ಜಪ್ಪುವುದಿಲ್ಲವ? ತಿನ್ನಲು ಆಸೆ ಪಟ್ಟರೆ ಏನೀಗ ಮನುಷ್ಯಳಲ್ಲವ ನಾನು? -
Ich bin zwar nicht daran gewöhnt, alles beim Essen zu probieren. Doch würde ich nie wagen, so was heimlich zu tun. Und sie fügte hinzu: 'Und würde es schaden, wenn ich überhaupt dem Hausherrn aus dem Hemd ein bisschen Geld nähme? Bin ich kein Mensch? Arbeite ich nicht hart bei ihnen?
ಬಂದು ಇಷ್ಟು ತಿಂಗಳಾಯಿತು. ಸಂಬಳ ಎಲ್ಲಿದೆ ನನಗೆ? ಕೇಳಿದರೆ `ಅದು ನನ್ನ ಮತ್ತು ನಿನ್ನಮ್ಮನ ನಡುವೆಯ ವಿಷಯ. ನಿಂಗೆ ಬೇಡ' ಎನ್ನುತ್ತಾರೆ. ನಂಗೊಂದು ಹೇರ್‌ಬ್ಯಾಂಡ್ ಬೇಕು. ಪೌಡರು ಕಾಡಿಗೆ ಹಣಿಗೆ ಎಲ್ಲ ಬೇಕು. ಇವರದನ್ನು ಮುಟ್ಟಿದರೆ ಗಲಾಟೆ. ನಂಗೆ ತೆಗೆದುಕೊಳ್ಳಲು ದುಡ್ಡಿಲ್ಲ.
So viele Monate sind schon vorbei, seit ich hierher gekommen bin. ‘Was ist mit meinem Gehalt los?’ Sharadakka sagte, ‘Das ist eine Sache zwischen mir und deiner Mama. Du brauchst nicht darum besorgt zu sein.’ Zuerst möchte ich mir diese Sachen besorgen: Schmink-Puder, Augen-Tinte, einen Kamm usw. Wenn ich nur ihre Sachen berühre, beschimpft sie mich heftig. Ich habe selber überhaupt gar kein Geld bei mir.
ನನ್ನನ್ನು ಇಂಥಲ್ಲಿಗೆ ಕಳಿಸಿದಳಲ್ಲ ಅಮ್ಮ! ಅವಳನ್ನು ಮೊದಲು ಕಡಿದು ಹುಗಿಯಬೇಕು'. - ಹಲ್ಲು ಕಡಿದಳು ಅಹಲ್ಯ. ಪುಟ್ಟ ಮಾಣಿಯೂ, ಅವಳ `ಬಾಬು'ವೂ - ಅವಳಂತೆ ಹಲ್ಲು ಕಡಿದು, ನಕ್ಕಿತು. ಅದರ ಮುಖದ ದೃಷ್ಟಿ ತೆಗೆದು ನೆಟಿಗೆ ಮುರಿದಳು. `ನೋಡಿ. ಇದಕ್ಕಿದ್ದ ಬುದ್ಧಿ ಅವರಿಗಿಲ್ಲ’ - ಎಂದಳು.
Mama hat mich hierher geschickt. Zuerst muss ich sie erschlagen und beerdigen.“ Sie knirschte mit den Zähnen. Das Kind machte es ihr nach, knirschte auch mit den Zähnen und lachte laut. Ahalya machte die Gesten, die Zeichen dafür waren, das Kind vor schlechten Einflüssen zu schützen. “Sehen Sie, dieser Bub hat mehr Weisheit als diese dummen Leute.”
ಈ ಹುಡುಗಿಯ ಒಂದು ಸಣ್ಣ ಆಸೆಗೆ ನಾನೂ ಸಹ ಅವಳ ದುಡ್ಡಿಗಾಗಿ ಕಾದು ಕುಳಿತಂತೆ ಇದ್ದೇನಲ್ಲ! ಎಷ್ಟು ಖರ್ಚು ಮಾಡುವುದಿಲ್ಲ ನಾನು! ಇದೊಂದು ಹೆಚ್ಚ?
Ich warte immer noch auf Ahalyas Gehalt. Kann ich es mir nicht leisten, ihr ein Haarband zu kaufen! Ist mir das Haarband zu teuer?
ಅವಳಿಗೆಂತ ಒಂದು ಅಗ್ಗದ, ಜಗಜಗಿಸುವ - ಅವಳಿಗೆ ಸಾಕು ಎಂತ ಮನಸ್ಸು ಅಚ್ಚು ಕಟ್ಟು ಬೋಧಿಸಿದ್ದರಿಂದ - ಹೇರ್‌ಬ್ಯಾಂಡ್ ತೆಗುದುಕೊಂಡು ಶಾರದೆ ಆಫೀಸಿಗೆ ಹೋದ ಹೊತ್ತಿನಲ್ಲಿ ಅವಳಿಗೆ ಕೊಟ್ಟು `ಮಾರಾಯ್ತಿ ನಾನು ಕೊಟ್ಟಿದ್ದೆಂತ ಹೇಳಬೇಡ.
Auf dem Weg nach Hause kaufte ich für Ahalya ein glänzendes Haarband, das ihr gefallen würde, dachte ich. Als Sharada zum Büro gegangen war, brachte ich es zu Ahalya. „Ahalyachen, sag nicht, dass ich es dir geschenkt habe. Sag ihr, du hattest schon etwas Geld gespart und dass du dir selbst etwas davon gekauft hast.“
`ಅದೆಲ್ಲ ಹೇಳಿಕೊಡಬೇಕ ನಂಗೆ? ಹೆಚ್ಚು ಕೇಳಿದರೆ ನಿಮ್ಮ ಗಂಡನ ಕಿಸೆಯಿಂದ ಕದ್ದೆ - ಎನ್ನುತ್ತೇನೆ. ನನಗೆ ದುಡ್ಡು ಕೊಡದೆ ಇವರು ದುಡಿಸಿಕೊಳ್ಳಬಹುದು. ನಾನು ಕದಿಯಬಾರದ?’ - ಎಂದಳು ಅಹಲ್ಯ.
„Nein, ich suche mir selbst eine Ausrede. Wenn nötig, sage ich, ich hätte ihrem Mann aus dem Hemd Geld gestohlen. Können sie mich zwingen, umsonst zu arbeiten? Warum soll ich nicht ihr Geld stehlen?“
`ಹಾಗೊಂದು ಮಾಡಬೇಡ'
‘ಅಲ್ಲ ಹಾಗೆ ಮಾಡುವುದಿಲ್ಲ. ಅದೆಲ್ಲ ಮಾತಿನಂಶ. ಆದರೆ ಅವರು ಮಾಡುವ ಸಣ್ಣ ಬುದ್ಧಿಗೆ ನನಗೆ ಹಾಗೆ ಅನಿಸುತ್ತದೆ'.
„Tu das bitte nicht!“ ermahnte ich sie.
„Nein, das tu ich nicht. Das sage ich nur so. Wegen ihrer Einstellung ärgere ich mich.“
ಸಣ್ಣ ಪುಟ್ಟ ವಸ್ತುಗಳಲ್ಲಿ ಏನೋ ಹೊಸ ಭಾವನೆಗಳನ್ನು ಅರಳಿಸಿಕೊಳ್ಳಲು ಯತ್ನಿಸುವ ಈ ಜೀವಕ್ಕೆ ಅದನ್ನು ತಂದುಕೊಡುವ ಶಕ್ತಿ ಇದ್ದೂ ಶಾರದೆ ಯಾಕೆ ಹಾಗೆ ಮಾಡಬೇಕು?
Warum kann Sharada die winzigen Wünsche des Mädchens nicht erfüllen, auch wenn sie sich das leicht leisten kann? Ich sollte Sharada einmal sagen, sie soll ihr mindestens ein Monatsgehalt bezahlen. Sonst ‘kauf ihr die Kleinigkeiten selbst.
ಶಾರದೆಗೆ ಹೇಳಬೇಕು ನಾನು. ಒಂದೋ ತಿಂಗಳ ಸಂಬಳ ಕೊಡು. ಇಲ್ಲವಾದರೆ ಕೊನೇ ಪಕ್ಷ ಇವೆಲ್ಲವನ್ನಾದರೂ ತೆಗೆಸಿಕೊಡು ಎಂತ. ಆದರೆ ಅವಳ ಬಾಯಿಯ ಮುಂದೆ ನಾನಲ್ಲ.
Warum kann Sharada die winzigen Wünsche des Mädchens nicht erfüllen, auch wenn sie sich das leicht leisten kann? Ich soll Sharada einmal sagen, sie soll ihr mindestens ein Monatsgehalt bezahlen. Sonst ‘kauf ihr die Kleinigkeiten selbst.’
ಆದರೆ ಅವಳ ಬಾಯಿಯ ಮುಂದೆ ನಾನಲ್ಲ. ಒಮ್ಮೆ ಸೂ ಎಂತ ಹೇಳಲು ಹೊರಟಿದ್ದೇ ಅವಳದೇ ವಿಷಯವೆಂತ ಹೇಗೆ ವಾಸನೆ ಹಿಡಿದಳೋ
Aber ich weiß vor ihren bösen Beschimpfungen keinen Schutz. Einmal, als ich so etwas zu sagen wagte, ahnte sie, was ich vorhatte und unterbrach mich gleich:
`ಮಾರಾಯ್ತಿ, ಈಗೀಗ ಎಂತದೂ ಮಾಡುವುದಿಲ್ಲ ಅದು. ಏನು ಕೆಲಸ ಹೇಳಿದರೂ ಕೇಳಿಸಿಯೇ ಇಲ್ಲದವರಂತೆ ಉಮ್ಮಲ್ತಿ ಭೂತದಂತೆ ತಿರುಗುತ್ತದೆ. ಒಂದು ಭತ್ತ ಹಾಕಿದರೆ ಹತ್ತು ಅರಳಾದೀತು ಅಂತಹ ಮುಖ ಹೊತ್ತುಕೊಂಡು. ಅಷ್ಟು ಸಿಟ್ಟು ಈ ನಸ್ರಾಣಿ ನನ್ನ ಮೇಲೆ ಮಾಡುವುದು?'
"Hör auf damit! Heutzutage tut sie gar nichts. Was immer ich ihr befehle, sie benimmt sich, als hätte sie das gar nicht gehört. Sie geht nur umher, wie ein Geist. Wenn du ihr auf das Gesicht ein Korn hinwerfen würdest, würde es sich sofort in ein Popcorn umwandeln . Darf sie, gerade mit mir so böse sein?"
ಅವತ್ತು ಜೋರು ಮಳೆ ಬರುತ್ತಿತ್ತು. ಮಾವಿನಹಣ್ಣು ಮಾರಿಕೊಂಡು ಬಂತು. ನಾನು ಕರೆದೆ. ಈ ಮಳೆಯಲ್ಲಿ ಎಂತ ಮಾವಿನಹಣ್ಣು ತಿನ್ನುವುದು, ಥಂಡಿ ಎಂದಳು ಅಹಲ್ಯ ಕಿಟಕಿಯಿಂದಲೇ. ಅಡ್ಡಿಲ್ಲ. ಇದು ಕಡೆಯದು. ನಂಗೆ ಬೇಕು. ಬಾ ಒಳ್ಳೆಯದು ಅರಿಸಿಕೊಡು ನೋಡುವ ಎಂದೆ.
Es regnete draußen in Strömen. Jemand rief: Ein Straßenhändler verkaufte Mangos. Er rief: „Reife Mangos, Mangos, wer möchte reife Mangos?“ Ich rief ihn zu mir. "Warum esst ihr Mangos in der Regenzeit? Ungesund. Ihr könntet euch erkälten," warnte mich Ahalya, aus dem Fenster heraus. "Das sind die letzten in der Saison, die brauche ich," sagte ich. Ich sagte ihr, komm, wähle mir einige gut aussehende Mangos aus.
ಬಂದಳು. ಖರೀದಿಸಿ ಅವಳಿಗೂ ಒಂದು ಹಣ್ಣು ಕೊಟ್ಟು ತಿನ್ನು ಎಂದೆ.`ಬೇಡಪ್ಪ ನಂಗೆ' - ಎಂದಳು.`ತಿನ್ನು, ದೌಲತ್ತು ಮಾಡಬೇಡ. ನಾನೂ ತಿನ್ನುತ್ತೇನೆ ಜೊತೆಗೆ' -
Sie kam. Ihr kaufte ich auch eine und gab sie ihr und sagte, "Iss doch die Mango!” “ Ich brauche keine.” Sie lehnte ab. "Iss doch die Mango! Mach doch kein Theater! Ich esse auch mit dir.”
‘ಬಾಬಣ್ಣನನ್ನು ಆಡಲು ಬಿಟ್ಟು ಇಬ್ಬರೂ ತಿನ್ನುತ್ತಿದ್ದಂತೆ ಫಕ್ಕನೆ ನನ್ನ ದೃಷ್ಟಿ ಹರಿದು ಇಲ್ಲಿ ಬಾ ಎಂದೆ. ಹತ್ತಿರ ಬಂದಳು... ಅರೆ! ನಾನೆಣಿಸಿದ್ದು ಸಮವೇ ‘ಅಯ್ಯೋ ಹುಡುಗಿ -- ನಿಂಗೆ ಗೊತ್ತೇ ಆಗಲಿಲ್ಲವ?'
Sie ließ Babanna, das Kind, spielen und kam zu mir her. Ich sah sie mir an. Was ich schon lange im Kopf hatte, ist heute passiert. Da waren Zeichen, dass sie Frau geworden ist. Ich rief, "Mädel, weißt du nicht?"
`ಏನು?’
`ನಿನ್ನ ಮಂಡೆ. ಹಣ್ಣು ಬಿಸಾಡು. ಒಳಗೆ ಬಾ' ಎಂತ ನಾನು ಒಳಗೋಡಿದೆ.
“Was?”
“Du Dummkopf, wirf die Frucht weg, komm rein,” sagte ich und rannte ins Haus.
ಅವಳಿಗೆ ಇಂಥದ್ದು ಎಂತ ತಿಳಿಯದೆ ಮಗುವನ್ನೆತ್ತಿಕೊಂಡು ಬಂದಳು. ಎಲ್ಲ ಹೇಳಿಕೊಟ್ಟು, ಬೇಕಾದದ್ದೆಲ್ಲ ಕೊಟ್ಟು ಬಾಬಣ್ಣನೆತ್ತಿಕೊಂಡು ನಾನು ಹೊರಗೆ ಬಂದೆ. ಮನೆಗೆ ಹೋದವಳೇ ಡ್ರೆಸ್ಸು ಬದಲಿಸಿ ಒಗೆದು ಹಾಕಿ ಬಿಡು ಎಂದೆ. ನಂಗೆ ಹರ್ಷ ಉಕ್ಕುತ್ತಿತ್ತು. ಬಾಬುವಿಗೆ ಮುತ್ತಿಟ್ಟೆ.
Ohne zu wissen, was los war, nahm sie das Kind und folgte mir ins Haus. “Du bist eine Frau geworden.” Ich erklärte ihr, was das heißt, und erklärte ihr, was sie nun alles zu tun hätte. Ich händigte ihr die notwendigen Tücher aus, nahm das Kind Babanna auf den Arm und leitete sie ins Haus. “Zieh dich sofort um und wasch die Wäsche.” Ich freute mich. Ich küsste Babanna.
ಸಂಜೆ ಬಂದ ಶಾರದೆ `ಅದು ಮುಟ್ಟಂತಲ್ಲ ಮಾರಾಯ್ತಿ’ ಎಂದಳು. `ಹೂಂ' `ಇನ್ನು ನಂಗೆ ಬೇಡವಪ್ಪ. ಮಿಂದು ಒಳಗೆ ಬಂದದ್ದೇ ಕಳಿಸಿಬಿಡುತ್ತೇನೆ'.
`ಯಾಕೆ ಅಷ್ಟು ಹೆದರಿಕೆ?'
Sharada sagte, als sie nach Haus kam: “Also das Mädel ist zur Frau geworden. Sofort nach ihrem ‘Reinwaschen’ schicke ich sie zu ihrer Mutter."
“Warum so viel Angst?”
`ಹೆದರಿಕೆಯ! ಸೆರಗಲ್ಲಿ ಬೆಂಕಿ ಕಟ್ಟಿಕೊಂಡ ಹಾಗಲ್ಲವ ಇನ್ನು?'
“Warum Angst, fragst du. Es ist gefährlich, sie weiter bei mir bleiben zu lassen, wie Feuer am Taillenband zu tragen.”
‘ಅದು ಹೌದೆನ್ನು. ಅಂತೂ ಡಾಕ್ಟರರ ಹತ್ತಿರ ಹೋಗದೆಯೆ ಹುಡುಗಿ ಆಯಿತಲ್ಲ. ಅದು ಸಂತೋಷವಲ್ಲವೆ?' - ಎಂದೆ.
“Das stimmt. Aber es ist geschehen, ohne ärztliche Behandlung; du kannst dich darüber freuen.”
`ಹೌದು ದುಡ್ಡು ಉಳಿಯಿತು. ಸುಮ್ಮನೆ ದಂಡವಾಗುತ್ತಿತ್ತು. ಅಲ್ಲನ?'
`ಅಂದರೆ, ಉಳಿಯುವುದು ಹೇಗೆ? ಅವಳು ಕೆಲಸ ಮಾಡಿದ್ದಕ್ಕೆ ದುಡ್ಡು ಕೊಡದಿದ್ದರೆ ಸರಿಯಾಗುತ್ತದೆ?'
“Das ist richtig. Wir haben das Geld gespart.”
“Wieso gespart? Musst du ihr das Gehalt nicht für ihre schon geleistete Arbeit bezahlen?“
`ಕೊಡುವುದಲ್ಲ ಮತ್ತೇನಲ್ಲ. ಸುಮ್ಮನಿರು ನೀನು ಸುಶೀಲಕ್ಕ. ಎರಡು ಹಳೆಯ ಸೀರೆ ತೆಗೆದಿಟ್ಟಿದ್ದೇನೆ. ಒಂದು ಚೂರು ಹರಿದಿಲ್ಲ. ನಾನು ಹೆಚ್ಚು ಉಟ್ಟೂ ಇಲ್ಲ. ಕೊಡುತ್ತೇನೆ. ಇಷ್ಟು ಕಾಲ ಅವಳ ದಿನ ಹೋಗಲಿಲ್ಲವ ಇಲ್ಲಿ? ಒಂದಕ್ಕೆರಡು ಖರ್ಚು ನನಗೆ.
“Gehalt bezahlen? Das braucht man doch nicht! Schweige darüber, Susilakka. Ich habe für sie zwei alte Saris aufgehoben. Fast neu. Nur zweimal getragen, gar nicht beschädigt. Die gebe ich ihr. Habe ich sie nicht lange Zeit gefüttert? Dabei hat sie Futter für zwei Personen gefressen. Wegen ihr habe ich doppelt soviel Geld ausgegeben.
ಇನ್ನು ಆದರ ಚೀಲದೊಳಗೆ ಏನೇನು ಸರಕು ತುಂಬಿಕೊಂಡಿದೆಯೋ. ಯಾವಾಗ ನೋಡಿದರೂ ಚೀಲದೊಳಗೆ ಕೈ ಹಾಕಿ ಗುರುಟುತ್ತಿರುತ್ತದೆ.
Ich weiß gar nicht, was sie alles in die Tasche gesteckt hat. Immer ist sie mit gehobenen Augenbrauen beim Suchen nach etwas.
ಏನೇ ಹೇಳು, ಕೆಲಸದವರನ್ನು ಹೆಚ್ಚು ನಂಬಬಾರದು' - ಎಂದಳು.
Was immer du sagst, glaube den Bediensteten nicht zu viel.“
ಅಹಲ್ಯ ಹೊರಟವಳು ನಮ್ಮ ಮನೆಗೆ ಬಂದು ಅದೆಲ್ಲ ಬೇಡ ಎಂದರೂ ಕಾಲಿಗೆ ನಮಸ್ಕರಿಸಿ `ಹೋಗುತ್ತೇನೆ ಸುಸಿಲಕ್ಕ' ಎಂದಳು. ಒಳಗೆ ಬಾ ಎಂತ ಅಡಿಗೆ ಮನೆಗೆ ತಿಂಡಿ ಕೊಟ್ಟು ಒಳ್ಳೆಯ ಒಂದು ಲೋಟ ಕಾಫಿ ಮಾಡಿ ಕೊಟ್ಟೆ.
ನನಗೆ ಮಾತು ಹಾರಿ ಹೋಗಿತ್ತು.
Als Ahalya schließlich bereit zur Abreise war, kam sie zu mir, fiel auf meine Füße und sagte, Auf Wiedersehen.’ Ich rief sie ins Haus und machte ihr ein Glas Kaffee. Ich konnte ihr gar nichts zum Trost sagen.
ಅವಳಿಗೂ ಗಂಟಲು ಉಬ್ಬುಬ್ಬಿ ಬರುತ್ತಿತ್ತು.
`ಸುಸಿಲಕ್ಕ, ನಂಗೆ ಮಾಣಿಯದೇ ಯೋಚನೆ. ಅದನ್ನಿನ್ನು ಈ ಕೈಕೆ ಹೇಗೆ ನೋಡಿಕೊಳ್ಳುತ್ತಾರೋ. ಯಾರು ಬರುತ್ತಾರೋ. ನನ್ನನ್ನ ಎಷ್ಟು ಹಚ್ಚಿಕೊಂಡಿತ್ತದು' ಎನ್ನುವಾಗ ಅವಳ ಕಣ್ಣಿಂದ ಬುಳಕ್ಕೆಂತ ಹನಿಯುದುರಿತು.
Sie seufzte “Susilakka, ich bin nur um das Kind besorgt. Wie wird sich diese böse Dame um das Kind kümmern?- Das ist meine Sorge. Wer wird später mit ihm spielen?” Ihre Tränen strömten aus ihren Augen.
`ಅಳಬೇಡ ಸುಮ್ಮನಿರು. ಒಂದಲ್ಲ ಒಂದು ದಿನ ನೀನು ಅವನನ್ನು ಬಿಟ್ಟು ಹೋಗಲೇ ಬೇಕಲ್ಲ. ನೀನೇಕೆ ಅಷ್ಟು ತಲೆ ಬಿಸಿ ಮಾಡಿಕೊಳ್ಳುತ್ತಿ. ಮಗು ಅವಳದು. ಅವಳು ನೋಡಿಕೊಳ್ಳದೆ ಇರುತ್ತಾಳ?'
“Weine nicht, Ahalya. Eines Tages müsstest du das Kind sowieso verlassen. Warum sorgst du dich so viel? Es ist ihr Kind. Sie sorgt für ihn. Hab keine Sorge!”
..... ಅಲ್ಲ ಸುಸಿಲಕ್ಕ, ಇವರು ಸಣ್ಣ ಬುದ್ಧಿಯವರೆಂತ ಗೊತ್ತಾದರೂ ಇಷ್ಟು ಸಣ್ಣ ಬುದ್ಧಿಯವರು ಎಂತ ತಿಳಿದಿರಲಿಲ್ಲ. ನನ್ನನ್ನು ಕಳಿಸುವುದಾದರೆ ಬೇರೆ ಯಾವ ನೆವ ಇಲ್ಲವ ಇವರಿಗೆ? ಹೋಗಲಿ. `ಮಗು ದೊಡ್ಡದಾಯಿತು. ಇನ್ನು ಬೇಡ' ಎಂದರೂ ನಾ ಹೊರಡುವವಳೇ.
“Susilakka, gemein sind diese Leute, das habe ich schon lange bemerkt, aber so sehr, das hätte ich nicht gedacht. Hat sie keine andere Ausrede, um mich zurück nach Hause zu schicken? Wenn sie mir direkt gesagt hätte, ‘Schau, das Kind ist schon groß; wir brauchen dich nicht mehr,' wäre das nicht so schlimm gewesen.
ಬದಲು ಇನ್ನೂ ಇನ್ನೂ ಇಟ್ಟುಕೊಂಡು ಸಾಕಿದರೆ ಮನೆಯಲ್ಲೇ ಹಾವು ಸಾಕಿದಂತೆ ಆದೀತು ಎಂದರು. ಯಾರನ್ನ ಎಷ್ಟೆಂತ ಕಾಯಲಿಕ್ಕಾಗುತ್ತದೆ ಎಂತಲೂ ಹೇಳಿದರು. ನನಗೆ ಅರ್ಥವಾಗುವುದಿಲ್ಲ ಅಂತವ?
Stattdessen hat sie mir gesagt, wenn ich noch weiter hier bliebe, wäre es wie eine Schlange im Haus zu haben. Sie hat auch gesagt, ‘Wie lange könnte man noch aufpassen?' Denkt sie, ich verstehe das alles nicht?“
ಇವರು ಯಾರನ್ನು ಕಾಯಬೇಕಂತೆ? ನನ್ನನ್ನಂತೂ ಬೇಡ. ಬೇಕಾದರೆ ಇವರ ಗಂಡನ್ನ ಕಾದುಕೊಳ್ಳಲಿ. ಎಲ್ಲ ಬಿಟ್ಟು ಇವರ ಗಂಡನ ಹತ್ತಿರವೇ ಹೋಗಬೇಕ ನಾನು? ಹೊಟ್ಟೆಗಿಲ್ಲದಿದ್ದರೂ ಆ ಕೋಡಂಗಿಯ ಹತ್ತಿರ ಹೋಗಲಿಕ್ಕಿಲ್ಲ. ಅವನ ಸೊಡ್ಡು ಕಂಡರೆ ಸಾಕಲ್ಲ. ಆ ಗಂಡನಿಗೆ ಆ ಹೆಂಡತಿ! ಲಗ್ತು! ಬ್ರಹ್ಮನಿಗೆ ಕಷ್ಟ ನಿಜಕ್ಕೂ'.
Auf wen muss man aufpassen? Nicht auf mich. Wenn nötig, könnte sie selbst auf ihren Mann aufpassen. Warum sollte ich ausgerechnet ihren Mann wählen? Auch wenn ich verhungern würde, ginge ich niemals zu ihm: es wäre genug, sein Affengesicht zu sehen! Der Mann und diese Frau passen gut zueinander. Der Gott Brahma hat sie füreinander geschaffen. Mit viel Anstrengung!”
`ಛೆ ಛೆ. ಸಿಟ್ಟಿನಲ್ಲಿ ಬಾಯಿಗೆ ಬಂದದ್ದು ಅನ್ನಬಾರದು'.
`ಬಾಯಿಗೆ ಬಂದದ್ದು ಎನ್ನುತ್ತೀರ ನೀವೂ? ನಿಮಗೇನು ಗೊತ್ತು ಸುಸಿಲಕ್ಕ? ನನ್ನ ಚೀಲ ಕೂಡ ಜಪ್ತಿ ಮಾಡಿದರು. ಅಲ್ಲಿ ಸಿಕ್ಕಿತು ಮಣ್ಣು. ನೋಡಿ ಇಲ್ಲಿ, ಬಸ್ ಛಾರ್ಜ್ ಮಾತ್ರ ಕೊಟ್ಟಿದ್ದಾರೆ.
“Nein, Nein, sowas darf man auch vor Wut nicht sagen!”
“Ich darf es nicht sagen! Ihr wisst nicht, Susilakka, was für ein Mensch sie ist. Auch meine Tasche hat sie kontrolliert. Was hat sie gefunden, außer einem Stück Erde!
ನೋಡಿ ಇಲ್ಲಿ, ಬಸ್ ಛಾರ್ಜ್ ಮಾತ್ರ ಕೊಟ್ಟಿದ್ದಾರೆ. ಬೇಗ ಹೋಗಲಿ ಎಂತ. ಹೆಚ್ಚಿಗೆ ಒಂದು ಕಾಸು ನನ್ನ ಕೈ ಮೇಲೆ! ಎರಡು ಹಳೆ ಹಪ್ಪಟೆ ಸೀರೆ ಕೊಟ್ಟಿದ್ದಾರೆ. ಅಮ್ಮನಿಗೆ ಇಷ್ಟೇ ಸಾಕಾಗುತ್ತದೆ. ಶಾರದಕ್ಕ ಒಳ್ಳೆಯವರಾಗುವುದಕ್ಕೆ. ಹೇಳಿದೆನಲ್ಲ. ಅಮ್ಮನನ್ನ ಕಡಿಯಬೇಕು ಮೊದಲು ಎಂತ' --
Sieh her, nichts als die Busfahrtkosten, damit ich schnell zu Hause bin. Mama genügt es, Sharadakka zu loben. Ich habe schon einmal gesagt, Mama sollte man zuerst erschlagen.. "
ಕಟ್ಟೆಯೊಡೆದ ಅಳು. ಎಷ್ಟು ಜೋರಾಗಿ ಅತ್ತಳು ಅಹಲ್ಯ. ಅವಳ ಆ ವಯಸ್ಸಿನ ಗೊತ್ತು ಗುರಿಯಿಲ್ಲದೆ ಏಳುವ ಆಸೆಗಳೆಲ್ಲ ಚಿಂದಿ ಚೂರಾಗಿ ಹರಿದು ಹರಿದು ಹೋಗುವಂತೆ. ನಾ ಮೆಲ್ಲ ಅಡಿಗೆ ಕೋಣೆಯ ಕಿಟಕಿ ಬಾಗಿಲು ಹಾಕಿದೆ.
Der Damm brach, die Tränen flossen. Mit allen Kräften weinte sie, sehr laut, als wollte sie alle ihre Hoffnungsschimmer zerreißen und hinauswerfen. Leise verschloss ich das Küchenfenster.
ಅಳುತ್ತ ತುಂಡು ತುಂಡಾಗಿ ಹೇಳಿದಳು.
‘ಸರಿಯಾಗಿ ನೋಡಿದರೆ ಶಾರದಕ್ಕನಿಗಿಂತ ನಾನು ಸಾಪಿಲ್ಲವೆ? ಯಾರಾದರೂ, ಅವರ ಗಂಡನಿಗಿಂತ ಚಂದದವರು, ನನ್ನನ್ನು ಮದುವೆಯಾದಾರು.
Seufzend fuhr sie weiter fort, “Wenn man mich genau betrachtet, bin ich nicht besser aussehend als Sharadakka? Irgendjemand, besser aussehend als ihr Mann, könnte mich heiraten.
ನಾನು ಅವರನ್ನು ಕರೆದುಕೊಂಡೇ ಒಮ್ಮೆ ಇವರ ಮನೆಗೆ ಬಂದು ಕಾಪಿ ಕುಡಿದು ಹೋದೇನು. ದೇವರು ಕಣ್ಣು ಬಿಟ್ಟರೆ ಎಷ್ಟು ಹೊತ್ತು'. - ಹುಡುಗಿಯ ಮುಖದಲ್ಲಿ ಪ್ರಾರ್ಥನೆಯೋ, ಛಲವೋ, ವಿಶ್ವಾಸವೋ ಎಂತದೋ ಸ್ಪಷ್ಟ ತಿಳಿಯುತ್ತಿರಲಿಲ್ಲ.
Dann würde ich einmal zu diesen Leuten kommen und bei ihnen eine Tasse Kaffee trinken. Wenn der liebe Gott seine Augen aufmacht, wie lange würde es dauern? Eine Weile.” Es war nicht klar, was für ein Gefühl ihr Gesicht ausdrückte: Andacht, Hartnäckigkeit, Selbstvertrauen?
ಯಾವ ಹಿನ್ನೆಲೆ ಮುನ್ನೆಲೆಯೂ ಇಲ್ಲದ ಆಕಾಂಕ್ಷೆಯ ಹೊಳಪು ಮಾತ್ರ ಇತ್ತು. ಅವಳು ಹೋಗಿ ಮುಟ್ಟುವಲ್ಲಿನ ಕತ್ತಲೆಯ ಬದುಕಿನಲ್ಲಿ ಅವಳ ಅದಮ್ಯ ಉತ್ಸಾಹ ನಂದದಿರಲಿ ಎಂತ ಹೃದಯವಿದ್ದ ಯಾರೇ ಆದರೂ ಹಾರೈಸುವಂತಿತ್ತು.
Das Zeichen einer entfernten Hoffnung zeigte sich darauf. Man konnte nur darauf hoffen, welches finstere Leben sie auch immer erreichen würde, dass ihr Eifer nie aufhören würde!
ಮನಸ್ಸನ್ನು ಎಷ್ಟು ಗಟ್ಟಿ ಮಾಡಿಕೊಂಡರೂ `ಶಾರದೆ. ಸಂಬಳವಿಲ್ಲವೆಂತ ಮಾಡಿಕೊಂಡೇ ನಿನ್ನನ್ನು ಕರೆದುಕೊಂಡು ಬಂದದ್ದು, ನಿನ್ನಮ್ಮನೂ ನಿಂಗೆ ಶಾರದೆ ಖರ್ಚು ಮಾಡಿದ್ದಾಳೆಂತಲೇ ಎಣಿಸುವುದು', ಅಂತೆಲ್ಲ ಅವಳಿಗೆ ಕೊನೆಯವರೆಗೂ ತಿಳಿಯದೇ ಹೋಗಬಹುದಾದ ಸಂಗತಿಯನ್ನು ಹೇಳಬೇಕೆಂದಿದ್ದದ್ದು ಹೇಳಲಾಗಲೇ ಇಲ್ಲ.
Ich hatte immer wieder versucht, Ahalya zu sagen, ihre Sharadakka hätte schon beschlossen ihrer Babysitterin kein Gehalt zu zahlen, bevor sie sie nach Hause brachte. Und Ihre Mama denkt immer noch, Sharada habe für die ärztliche Behandlung von Ahalya schon viel Geld ausgegeben. Das wortwörtlich zu sagen, konnte ich immer noch nicht wagen.
ಇವಳು ಹೊರಟು ಹೋಗುತ್ತಾಳೆ. ನಾಳೆ ಬೆಳಗಾದರೆ ನಾನು ನೋಡುವುದು ಶಾರದೆಯ ಮುಖವನ್ನೇ ಅಲ್ಲವೆ?... ಇಷ್ಟಕ್ಕೂ ಶಾರದೆ ನನ್ನ ಹತ್ತಿರ ಸುಳ್ಳನ್ನೇ ಯಾಕೆ ಹೇಳಿರಬಾರದು?
Ahalya verlässt das Haus und danach würde ich schon an jedem Tagesbeginn das Gesicht von Sharada sehen. … Und wie sicher ist es, dass Sharada nicht selbst gelogen hat?
ಬಾಬಣ್ಣ ಹೇಗಿದ್ದಾನೆಂತ ನನಗೆ ಬರೆಯಿರಿ ಆಯಿತ? ಎಂದು ಹೇಳುತ್ತ ಹೊರಟಳು ಅಹಲ್ಯ. ಅವಳನ್ನು ಕಳಿಸಲು ಬಾಗಿಲ ಬಳಿಗೆ ಬಂದವಳಿಗೆ ಶಾರದೆ ತನ್ನ ಮನೆ ಮೆಟ್ಟಿಲ ಮೇಲೆ ಸೊಂಟಕ್ಕೆ ಕೈಕೊಟ್ಟು ಮುಖ ಬೀಗಿಸಿ ನಿಂತದ್ದು ಕಾಣಿಸಿತು.
Als mir Ahalya ‚Auf Wiedersehen‘ sagte, bat sie mich, ihr ab und zu zu schreiben, wie es dem Babanna geht. Gerade zu dieser Zeit stand Sharada auf der Treppe, mit geschwollenen Wangen.
ಅಹಲೈಯನ್ನು ಕಂಡವಳೇ `ಆಯಿತ!' - ಎಂದಳು ಭರಮಿನಿಂದ. ಅಹಲ್ಯೆಯ ಬದಲಿಗೆ ನಾನೇ ಉತ್ತರಿಸಿದೆ `ಏನು, ಆಯಿತ' ಎಂದರೆ?' - ಶಾರದೆ ಮಾತಾಡಲಿಲ್ಲ.
Sobald sie Ahalya sah, fragte sie, ‘Fertig?’ Da fragte ich zurück, Was heißt ‘fertig’? Darauf reagierte sie nicht.
ಅಹಲ್ಯ ತನ್ನ ಚೀಲ ಎತ್ತಿಕೊಂಡು ಹೊರಟು ಹೋದಳು. ಅವಳು ಹೋದ ದಿನ ರಾತ್ರಿ ಇಡೀ ಬಾಬಣ್ಣ ಅಳುತ್ತಿರುವುದು ಕೇಳಿಸುತ್ತಿತ್ತು. ದಿನ ಹೋದಂತೆ ಅದು ಹೆಚ್ಚಾಯಿತು.
Ihre Tasche tragend verließ Ahalya das Haus. In der ganzen Nacht hörte man das Weinen von Babanna. Von Tag zu Tag nahm es zu.
ಒಂದು ತಿಂಗಳ ಮೇಲೆ ಮತ್ತೊಂದು ಹುಡುಗಿ, ಸುಮಾರು ಹತ್ತು ಹನ್ನೆರಡು ವರ್ಷದ್ದಿರಬಹುದು, ಬಂದಿಳಿದದ್ದು ತಿಳಿಯಿತು. ತಿಂಗಳಿಗೆ ಹತ್ತು ರೂಪಾಯಿ, ಒಂದು ಹೊಸ ಜೋಡು, ಹೊಸ ಅಂಗಿ, ವರ್ಷಕ್ಕೆ. ಮೈ ನೆರೆದೊಡನೆ ಕಳಿಸುವುದೇ ಎಂದಳು ಶಾರದೆ. ಈಗ ಶಾರದೆಗೆ ಹೊಸ ಹೆಣ್ಣಿನ ವಿಷಯ ಬಿಟ್ಟರೆ ಬೇರೆ ಇಲ್ಲ.
Nach ungefähr einem Monat kam ins Nachbarhaus eine neue Babysitterin, wie ich erfuhr. Sharada sagte, sie sei etwa 12 Jahre alt, sie werde monatlich 10 Rupien Gehalt und in einem Jahr ein paar neue Kleider bekommen. Nur bis sie menstruiert. Jetzt ist die neue Babysitterin ihr einziges Gesprächsthema.
ಅಹಲ್ಯನ ಉಂಗುಷ್ಠಕ್ಕೆ ಸಮನಲ್ಲ ಈ ಹುಡುಗಿ. ಬರೀ ಹುಡುಗಾಟಿಕೆ. ಮಗುವಾಡಿಸುತ್ತ ಕೂತು ಬಿಡುತ್ತದೆ. ಒಂದು ಆಚಿನ ಕಡ್ಡಿ ಈಚೆ ಇಡುವುದಿಲ್ಲ' - ಎನ್ನುತ್ತಿದ್ದಳು.
Sie sei hundertmal weniger fleißig, sagte Sharada. Sehr kindlich. Spiele den ganzen Tag mit dem Kind, tut nicht einmal etwas anderes.
ಹೊಸ ಹುಡುಗಿಯ “ಆಕಾಶಿ ಮೇಲೆ ಬೂಚಿ ಬಿತ್ತೊ, ಅಕ್ಕನ ಮನೆಗ್ಹೋಪ, ಅಕ್ಕಿ ಇಲ್ಯಲೆ, ಸಾಲ ತಪ್ಪೊ, ಸಾಲ ಕೊಡುವವರ್ಯಾರೂ, ಗುಡ್ಡದ ಮೇಲಿನ ಗಿಡ್ಡ ಪುಟಾಣಿ ನಮ್ಮ ಬಾಬಣ್ಣ ಮರಿ ಇತ್ತಲೆ - ಕಲ್ಲು ಮುಳ್ಳು ಹಾದಿ ಬೀದಿ, ಕಲ್ಲು ಮುಳ್ಳು ಹಾದಿ ಬೀದಿ, ಕುಚು ಕುಚು ಕುಚು ಕುಚು ಎಂದು ಕಚುಗುಳಿಯಿಟ್ಟಾಗ ಬಾಬಣ್ಣ ಕಾಕು ಹಾಕಿ ನಗುವುದು ನಮ್ಮ ಮನೆಗೂ ಕೇಳಿಸುತ್ತಿತ್ತು.
Das neue Mädchen spielte mit dem Knaben. Man hörte sie singen: “Der Himmel ist gefallen; gehen wir zur Schwester; sie hat doch keinen Reis zu Hause; leihen wir Geld; wer würde uns Geld leihen? Auf dem Berg wohnt unser Babanna! Der Weg dahin ist voller Steine und Nadeln.“ Man hörte den Knaben laut lachen, als sie ihn kitzelte.
ಬಾಬಣ್ಣ ಹೇಗಿದ್ದಾನೆ ಬರೆಯಿರಿ ಎಂತ ಹೇಳಿದ್ದಳು ಅಹಲ್ಯ. ಬಾಬಣ್ಣನಂತೆ ನಾನೂ ಮರೆತೆನೆ ಅಹಲ್ಯೆಯನ್ನು? ಅವಳಿಗೆ ಕಾಗದ ಬರೆಯಲೇ ಇಲ್ಲ ನಾನು ಎಂದುಕೊಳ್ಳುವಾಗ ನನ್ನ ಕಣ್ಣ ಮುಂದೆ ಸುಳಿದ ಅಹಲೈಯ ರೂಪ ಮಸುಕು ಮಸುಕಾಗಿತ್ತು.
Ahalya hatte mir gesagt, ich solle schreiben, wie es Babanna gehe. Habe ich sowohl Ahalya vergessen als auch Babanna? Ich habe noch nie an sie geschrieben, fiel mir ein. Das Bild von Ahalya vor meinen Augen war schon neblig.
Vaidehi
1980
übersetzt von N Thirumaleshwara Bhat 2022
Glossary
Anmerkungen
Die Handlung dieser Kurzgeschichte spielt sich etwa in der ersten Hälfte des 19. Jahrhunderts in einem südindischen Städtchen ab. Das Dienstmadchen hier is mit dem modernen Au-Pair Mädchen zu vergleichen.
Die Übersetzung ist dem Originaltext nicht wortwörtlich vergleichbar.
Personen in dieser Erzählug:
Susila /Susheela (Susilakka): die Ich-Erzählerin
Sharada (Sharadamma, Sharadakka): die Hausherrin
Ahalya: das Dienstmädchen
Susamma: Die Mutter von Ahalya
Babanna: der Bube
Glossar
*-akka (Akka – ‚ältere Schwester‘, auch als respektvolle Anrede) steht den Frauennnamen als Suffix.
Zehn Rupien: In der erzählten Zeit (Mitte 19.Jhs) war 10 Rupien viel Geld.
Dattatri (wörtlich): ein Gottesname, ein wenig verändert
Abbalige : Crossandra, Tapirblume
Chudi: Die Tradition unter den Gowda Saraswat Brahmanen – bekannt als Konkanis – sie sprechen die Konkani-Sprache – Anbetungen im Monat Sona, etwa vom 15. August bis zum 15. September, durchzuführen und Blumen in verschiedenen Farben, die künstlerisch in kleinen Sträußen namens Chudi arrangiert sind, unter den benachbarten Frauen zu verteilen.
Coutesy:
Kultur-Dialog.com dankt der Autorin Vaidehi für die freundliche Genehmigung, ihre Kurzgeschichte hier mit Übersetzung zu veröffentlichen. Dem Übersetzer Dr. N.T. Bhat gilt unser Dank für die Mühe, diese Kurzgeschichte ins Deutsch zu übersetzen. Wir danken auch Frau Dagmar Brech für die freundliche Unterstützung mit Korrekturlesen. Auch Frau Mythri B., der diese Texte bilingual arrangiert hat, gilt unser besonderer Dank.