ತೋಪಿನಮನೆ

Foreign translations> ತೋಪಿನಮನೆ
BAPA1.jpg

Gartenhaus

ಎಂ.ವಿ.ಪ್ರಾಣೇಶ್ ರಾವ್

M.V.Pranesh Rao, 3. März 1938

BAPA1.jpg
20230127_212022.jpg

Gartenhaus

Übersetzt von : M.P. Rajendra, sein Sohn)

Translated by : M.P. Rajendra, his son

20230127_212022.jpg

ನಾನು ಮನೆ ಬಿಡುವ ಹೊತ್ತಿಗೆ ಸುಮಾರು ಕತ್ತಲಾಗಿತ್ತು. ಸೂರ್ಯ ತನ್ನ ಕೆಲಸ ಮುಗಿಸಿ ಪಶ್ಚಿಮದಲ್ಲಿ ಬೆಟ್ಟಗಳ ಹಿಂದೆ ಅಡಗಿಕೊಂಡ. ನಾನು ಪಕ್ಕದ ಹಳ್ಳಿಯ ಶಾಮಣ್ಣ ಅವರನ್ನು ಭೇಟಿ ಮಾಡಲೇಬೇಕಾಗಿತ್ತು. ಒಲ್ಲದ ಮನಸ್ಸಿನಿಂದ ನಡೆದುಕೊಂಡು ಹೊರಟೆ.

ಎರಡು ಹಳ್ಳಿಗಳ ಮಧ್ಯ ದಟ್ಟವಾದ ಕಾಡು ಬೇರೆ. ಆದರೆ ಕಾಡುಪ್ರಾಣಿಗಳು ಇಲ್ಲದೆ ಇದ್ದುದರಿಂದ ಭಯ ಏನೂ ಇರಲಿಲ್ಲ. ಜೊತೆಗೆ ಯಾರಾದರು ಇದ್ದಿದ್ದರೆ ದಾರಿ ಬೇಗ ಕಳೆಯುತ್ತಿತ್ತು ಎಂದು ಯೋಚಿಸುತ್ತ ಹೊರಟೆ. ಸುಮಾರು ಎರಡು ಗಂಟೆ ನಡೆಯುವಷ್ಟರಲ್ಲಿ ಒಂದು ಮಾವಿನ ತೋಪು ಸಿಕ್ಕಿತು.

Es war schon dunkel, als ich von zu Haus aufbrach. Die Sonne war schon im Begriff, nach ihrer täglichen Arbeit, hinter den Bergen zu verschwinden. Ich musste Herrn Shamanna aus dem Nachbardorf treffen. Mit großem Unwillen machte ich mich zu Fuß auf den Weg.

Zwischen den zwei Dörfern gibt es einen dichten Wald. Da sich keine Wildtiere in dem Wald befanden, hatte ich keine Angst. Ich dachte, dass der Fußweg leichter gewesen wäre , wenn irgendein anderer mir Gesellschaft geleistet hätte.

Ich war etwa zwei Stunden unterwegs und gelang zu einem Mangohain.

ಸ್ವಲ್ಪ ದಣಿವಾಗಿತ್ತು. ಸುಧಾರಿಸಿಕೊಂಡು ಹೋಗೋಣ ಎಂದು ಅತ್ತಿತ್ತ ನೋಡಿದಾಗ ದೂರದಲ್ಲಿ ಒಂದು ಪಾಳು ಬಿದ್ದ ಮನೆ ಕಾಣಿಸಿತು.

ಅಲ್ಲಿ ಹೋಗಿ ಕುಳಿತುಕೊಳ್ಳುವ ಮನಸ್ಸಾದರು ಸ್ವಲ್ಪ ಹಿಂಜರಿತ.

ಕಳ್ಳಕಾಕರಿದ್ದರೆ ಅಥವಾ ದರೋಡೆಕೋರರಿದ್ದರೆ...? ಆ ಮನೆಯಿಂದ ಯಾರೊ ಕೂಗಿದಂತೆ ಆಯಿತು. ಕಗ್ಗತ್ತಲೆ, ಯಾರೂ ಕಾಣಿಸಲಿಲ್ಲ.

"ಹೆದರಬೇಡಿ, ಬನ್ನಿ ನನ್ನ ಜೊತೆ ಸ್ವಲ್ಪ ಸಮಯ ಮಾತನಾಡಿ ಹೋಗಿ. ಒಬ್ಬನೇ ಇದ್ದು ಬೇಸರವಾಗಿದೆ". ದೃಷ್ಟಿಸಿ ನೋಡಿದಾಗ ಮಧ್ಯವಯಸ್ಸಿನ ಸಪೂರವಾದ ಮನುಷ್ಯ ತೋಪಿನ ಮನೆಯಿಂದ ಹೊರಗೆ ಬರುತ್ತಿರುವುದು ಗೋಚರವಾಯಿತು.

Ich war ein wenig müde. Mit der Absicht, mich ein bisschen auszuruhen, hielt ich Ausschau. In der Ferne nahm ich ein verfallenes Haus wahr.

Obschon ich hingehen und mich auf die Bank setzen wollte, war mir ein wenig bange.

Sollte es da Räuber oder Mörder geben...? Ich hatte auch das Gefühl, dass jemand mich aus dem Haus rief. Es war zu dunkel, um jemanden wahrnehmen zu können.

„Haben Sie keine Angst. Kommen Sie und sprechen Sie eine Weile mit mir. Ich bin allein und mir ist langweilig.“ Als ich genau hinsah, erkannte ich einen schlaksigen Mann mittleren Alters aus dem Haus heraustreten.

ಭಯಪಡುತ್ತಲೆ ಅವನ ಕಡೆ ಹೋದೆ.

"ಇಷ್ಟು ಹೊತ್ತಿನಲ್ಲಿ ಎಲ್ಲಿಗೆ ಹೋಗುತ್ತಿದ್ದೀರ"?

"ಇಲ್ಲೆ ಪಕ್ಕದ ಹಳ್ಳಿಗೆ, ಯಾರನ್ನೊ ಭೇಟಿ ಮಾಡಬೇಕಾಗಿತ್ತು".

"ಯಾರು, ಶಾಮಣ್ಣ ಅವರನ್ನೆ"?

" ಹೌದು, ನಿಮಗೆ ಅವರ ಪರಿಚಯ ಇದೆಯ"?

" ನನಗೆ ತುಂಬ ಬೇಕಾದವರು. ಅವರನ್ನು ತುಂಬಾ ವಿಚಾರಿಸಿದೆ ಎಂದು ಹೇಳಿ".

"ಆಯಿತು, ತಮ್ಮ ಹೆಸರು"?

" ತೋಪಿನ ಮನೆಯವರು ಅಂತ ಹೇಳಿ, ಅವರಿಗೆ ಗೊತ್ತಾಗುತ್ತೆ".

ನಾನು ಒಂದು ಕ್ಷಣ ಬೇರೆ ಕಡೆ ನೋಡುವಷ್ಟರಲ್ಲಿ ಆ ವ್ಯಕ್ತಿ ಮಾಯವಾಗಿದ್ದ.

ನನ್ನ ಜಂಘಾಬಲ ಉಡುಗಿ ಹೋಯಿತು. ಅಲ್ಲಿಂದ ದಾಪುಗಾಲು ಹಾಕುತ್ತ ಹೊರಟೆ.ಎದೆ ಡವಡವ ಹೊಡೆದುಕೊಳ್ಳುತ್ತಿತ್ತು.

Trotz der Beklemmung ging ich auf ihn zu.

„Wohin gehen zu dieser Zeit?“

„Nur zum Nachbardorf. Ich muss jemanden treffen“.

„Wen denn, Herrn Shamanna?“

„Ja, kennen Sie ihn?“

„Mir ist er ein Nahestehender. Sagen Sie ihm, dass ich mich nach ihm erkundigt habe.“

„Ja, gern. Aber wie ist Ihr Name bitte.“

„Sagen Sie ihm, dass ich der Bewohner des Hauses im Mangohain sei. "Er wird mich kennen."

Im Nu war er verschwunden, während mein Augenmerk für einen Augenblick abgelenkt worden war.

Ich war erschrocken und außer mir. Obwohl ich weiche Knie bekam, ging ich von dannen mit ausgreifenden Schritten. Mein Herz raste.

ಮತ್ತೆ ರಸ್ತೆ ತಲುಪಿದ ಮೇಲೆ ದೇವರ ಧ್ಯಾನಮಾಡುತ್ತ ವೇಗವಾಗಿ ನಡೆಯತೊಡಗಿದೆ.

ಸ್ವಲ್ಪ ದೂರ ನಡೆಯುವಷ್ಟರಲ್ಲಿ ಪರಿಚಯದವನೊಬ್ಬ ಮುಂದೆ ಹೋಗುತ್ತಿದ್ದ. ನಾನು ಅವನ ಹಿಂದೆ ಹೋಗಿ ಅವನ ಜೊತೆ ಹೆಜ್ಜೆ ಹಾಕುತ್ತ ಕೇಳಿದೆ:

"ಊರಾಚೆ ಇರುವ ಮನೆ ಯಾರದು"?

ಅವನು ಬೆಚ್ಚಿ ಬಿದ್ದು ಕೇಳಿದ "ಯಾವ ಮನೆ ಸ್ವಾಮಿ"?

"ತೋಪಿದೆಯಲ್ಲ, ಅದರಲ್ಲಿರುವ ಮನೆ".

"ಅಲ್ಲಿ ಮನೆ ಇರುವುದು ನಿಮಗೆ ಹೇಗೆ ಗೊತ್ತಾಯಿತು? ರಸ್ತೆಯಿಂದ ಕಾಣಿಸುವುದಿಲ್ಲವಲ್ಲ?"

"ಹೌದು, ಬೇಗ ಹಳ್ಳಿ ತಲುಪೋಣ ಅಂತ ಕಾಲುದಾರಿಯಲ್ಲಿ ಬಂದೆ. ಮನೆ ಕಾಣಿಸಿತು, ಸ್ವಲ್ಪಸುಧಾರಿಸಿಕೊಂಡು ಹೋಗೋಣ ಅಂತ ಹೋದೆ."

Nachdem ich die Straße erreicht hatte, „nahm ich den Namen Gottes“ und begann schnell zu laufen.

Nach kurzer Zeit erblickte ich einen Bekannten, der vor mir ging. Ich überholte ihn und hielt Schritt mit ihm. Dabei fragte ich ihn:

„Wem gehört das Haus, das außerhalb des Dorfes liegt?“

Er zuckte in sich zusammen und fragte leise „ Welches Haus?“

„Das in dem Hain.“

„Woher wissen Sie, dass es da ein Haus gibt? Von der Strasse aus sieht man das nicht.“

„Ja, Ich wollte das Dorf früher erreichen und deshalb nahm ich den Pfad. Ich erblickte das Haus und wollte mich ein wenig ausruhen, darum bin ich hingegangen.“

"ಸ್ವಾಮಿ, ನೀವು ಅಲ್ಲಿ ಹೋಗಬಾರದಿತ್ತು. ಅದು ದೆವ್ವದ ಮನೆ."

ಕೆಲವು ಕ್ಷಣ ನನಗೆ ಏನೂ ಹೇಳಲು ಆಗಲಿಲ್ಲ. ನಂತರ ತಡವರಿಸಿಕೊಂಡು ಅಲ್ಲಿ ನಡೆದದ್ದನ್ನು ಅವನಿಗೆ ಹೇಳಿದೆ.

"ನಿಮ್ಮ ಅದೃಷ್ಟ ಚೆನ್ನಾಗಿತ್ತು. ಬದುಕಿ ಬಂದಿದ್ದೀರ. ಆ ಮನೆಗೆ ಹೋದವರು ಯಾರು ಜೀವಂತವಾಗಿ ಹಿಂತಿರುಗಿ ಬಂದಿಲ್ಲ. ಅಲ್ಲಿ ಭೂತಗಳ ಕಾಟ. ನಾಲ್ಕು ದಿನಗಳ ಹಿಂದೆ ಅಲ್ಲಿ ಹೋಗಿದ್ದವನನ್ನು ಹಿಡಿದು ಸದೆಬಡೆದವು. ಹೇಗೊ ಓಡಿಬಂದು ಮನೆ ಸೇರಿಕೊಂಡ. ಎರಡು ದಿನಗಳ ಮೇಲೆ ಹೆದರಿಕೆಗೆ ಜ್ವರ ಬಂದು ತೀರಿಕೊಂಡ."

„Sie hätten nicht dorthin gehen sollen. Es ist ein Spukhaus.“

Eine Zeitlang konnte ich kein Wort über die Lippen bringen. Ich beruhigte mich und stotternd erzählte ich ihm alles, was stattgefunden hatte.

„Sie hatten Glück. Sie sind lebendig zurückgekehrt. Keiner, der dahin geht, bleibt am Leben. Das Hause wimmelt von Gespenstern. Erst vor vier Tagen hat sich ein Junge verirrt und landete in dem Haus. Er wurde von den Geistern gefangen genommen und wurde grün und blau geschlagen. Irgendwie hat er sich von ihnen befreit und sein Haus erreicht. Nach zwei Tagen hatte er hohes Fieber und kam ums Leben.“

ನಾನು ನನಗಾದ ಭಯವನ್ನು ಅವನಿಗೆ ತೋರ್ಪಡಿಸಲಿಲ್ಲ.

ಅಷ್ಟು ಹೊತ್ತಿಗೆ ಶಾಮಣ್ಣನವರ ಮನೆ ಬಂದಿತ್ತು.

ಅವನೇ ಹೋಗಿ ಅವರ ಮನೆ ಬಾಗಿಲನ್ನು ತಟ್ಟಿದ.ಸ್ವಲ್ಪ ಸಮಯದ ನಂತರ ಕೈನಲ್ಲಿ ಲಾಂದ್ರವನ್ನು ಹಿಡಿದುಕೊಂಡು ಕೆಂಚಪ್ಪ ಬಂದ, ಅವನ ಹಿಂದೆ ಶಾಮಣ್ಣನವರೂ ಬಂದರು. ಕೆಂಚಪ್ಪ ನಮ್ಮ ಹಳ್ಳಿಯವನು, ಆದರೆ ಈಗ ಶಾಮಣ್ಣನವರ ಮನೆಯಲ್ಲಿ ಕೆಲಸ ಮಾಡುತ್ತಿದ್ದ.

"ಬನ್ನಿ ಸ್ವಾಮಿ, ಕೆಂಚಪ್ಪ ಎಲ್ಲಾ ವಿಷಯಗಳನ್ನು ಹೇಳಿದ. ನಮ್ಮ ಮನೆ ಇರುವಾಗ ನೀವು ಪಂಚಾಯತಿ ಕಚೇರಿಯಲ್ಲಿ ಇರಬೇಕೇಕೆ"?

Ich zeigte ihm meine Erschütterung nicht.

Ohne es gemerkt zu haben, standen wir vor Shamannas Haus.

Mein Bekannter ging zur Tür und klopfte. Nach kurzer Zeit kam Kenchappa mit einer Laterne in der Hand, gefolgt von Shamanna, und öffnete die Tür. Kenchappa ist aus unserem Dorf, aber arbeitet jetzt für Herrn Shamanna.

„Bitte kommen Sie rein, Kenchappa hat mir alles erzählt. Wenn Ihnen unser Haus zur Verfügung steht, brauchen Sie nicht in der Sozialwohnung zu übernachten.“

"ಅದಕ್ಕೆ ಅಲ್ಲಿಗೆ ಹೋಗದೆ ನಿಮ್ಮ ಮನೆಗೇ ಬಂದೆ" ಎಂದೆ

ಅವರನ್ನು ಹಿಂಬಾಲಿಸಿಕೊಂಡು ಅವರ ಮನೆಯ ಒಳಗೆ ಹೋದೆ. ಮನೆ ಅಚ್ಚುಕಟ್ಟಾಗಿತ್ತು, ದೊಡ್ಡದು ಕೂಡ. ಮನೆಯ ಸುತ್ತ ಗಿಡ ಮರಗಳು. ಯಾವ ವಿಷಯದಲ್ಲೂ ಅವರಿಗೆ ಕೊರತೆ ಇದ್ದ ಹಾಗೆ ಕಾಣಿಸಲಿಲ್ಲ.

ಶಾಮಣ್ಣನವರಿಗೆ ಸುಮಾರು 45 ವರ್ಷ ಆಗಿದ್ದಿರಬಹುದು. ಅವರ ಸಂಸಾರ ಚಿಕ್ಕದು: ಅವರು, ಅವರ ಪತ್ನಿ ಶಾರದಮ್ಮ, ತಾಯಿ ಲಕ್ಷ್ಮಮ್ಮ ಮತ್ತು ಮಗ ಗುಂಡ- ಒಟ್ಟು ನಾಲ್ಕು ಜನ.

„Ja, ich weiß. Deswegen bin ich direkt zu Ihnen gekommen.“

Ich folgte ihm in sein Haus. Ein schönes Haus, auch ziemlich groß. Rund ums Haus gab es reichlich Bäume und Pflanzen. Es war augenfällig, dass er ein wohlhabender Mensch war.

Er war etwa 45 Jahre alt. Seine Familie war klein. Dazu gehörten seine Frau Sharada, seine Mutter Lakshmamma und sein Sohn Gunda. Insgesamt vier Personen.

ಊಟವಾದ ಮೇಲೆ ನಾನು ಮತ್ತು ಶಾಮಣ್ಣ ಮನೆಯ ಮುಂದಿನ ಜಗಲಿಯ ಮೇಲೆ ಕುಳಿತು ಮಾತನಾಡುತ್ತಿದ್ದೆವು. ಆಗ ನಾನು ಆ ತೋಪಿನಮನೆ ಹಾಗೂ ಅಲ್ಲಿ ನಡೆದ ಘಟನೆಗಳ ಬಗ್ಗೆ ಹೇಳಿದೆ. ಅದನ್ನು ಕೇಳಿ ಅವರು ಸ್ವಲ್ಪ ಹೆದರಿದ ಹಾಗೆ ಕಾಣಿಸಿತು.

ಮೆತ್ತನೆ ಧ್ವನಿಯಲ್ಲಿ ಕೇಳಿದರು "ಏನು, ನೀವು ಅಲ್ಲಿಗೆ ಹೋಗಿದ್ದಿರ"?

"ಹೌದು, ನಾನು ಕೇಳಿದ್ದೆಲ್ಲಾ ನಿಜವೆ"?

Nach dem Abendessen setzten wir uns auf den Säulengang und unterhielten uns. Ich erwähnte das Haus im Mangohain und mein Erlebnis da. Als er das hörte, war er ein wenig beunruhigt.

Leise fragte er mich: „Sind Sie hin gegangen?“

„Ja. Ist alles, was ich gehört habe, wahr?“

ಅವರು ಮುಖ ಬೇರೆ ಕಡೆ ತಿರುಗಿಸಿಕೊಂಡರು. ಬಾಯಿಂದ ಒಂದು ದೊಡ್ಡ ನಿಟ್ಟುಸಿರು ಹೊರಬಿತ್ತು. ಹಲವು ಕ್ಷಣಗಳ ನಂತರ "ಹೋಗಲಿ ಬಿಡಿ, ಏನು ನಿಜವೊ, ಏನು ಸುಳ್ಳೊ, ಅದರ ವಿಚಾರ ಇರಲಿ" ಎಂದರು.

ನನಗೆ ಕುತೂಹಲ ಬಲವಾಯಿತು. ಬಲವಂತಪಡಿಸಿ ಕೇಳಿದ್ದಕ್ಕೆ

"ಅದೊಂದು ದೊಡ್ಡ ಕಥೆ. ಈಗ ಹೇಳುತ್ತಾ ಕುಳಿತರೆ ತುಂಬಾ ತಡವಾಗುತ್ತದೆ. ಈಗಾಗಲೆ ತುಂಬ ಸಮಯವಾಗಿದೆ. ಬೇಕಾದರೆ ಬೆಳಿಗ್ಗೆ ಹೇಳುತ್ತೇನೆ. ಈಗ ನೀವು ಮಲಗಿ. ದಣಿದು ಬಂದಿದ್ದೀರಿ".

Er wandte sich ab und seufzte lange, ehe er sagte: „Lassen Sie es, wer weiß, was wahr oder was gelogen ist? Wir brauchen uns darüber nicht den Kopf zerbrechen.“

Ich war neugierig und konnte die Finger nicht davon lassen. Als ich darauf bestand, sagte er: „Das ist eine lange Geschichte. Es dauert sehr lange und es ist schon spät. Wenn Sie wollen, erzähle ich das morgen. Gehen Sie jetzt schlafen. Sie sind bestimmt müde.“

ನಾನು ಬಿಡಬೇಕಲ್ಲ. ಈಗಲೇ ಹೇಳಬೇಕು ಎಂದು ಒತ್ತಾಯ ಮಾಡಿದೆ.

ಅವರು ಸರಿಯಾಗಿ ಕುಳಿತುಕೊಂಡು "ಹಾಗಿದ್ದರೆ ಕೇಳಿ. ಆ ಮನೆ ಬಾಳೆಕಾಯಿ ಸುಬ್ಬರಾಯರ ಮನೆ. ಅವರಿಗೆ ಒಬ್ಬ ಮಗ, ಒಬ್ಬ ಮಗಳು ಇದ್ದರು. ಮಗಳನ್ನು ಇದೆ ಹೊನ್ನೂರು ಜಹಗೀರದಾರರ ಮಗನಿಗೆ ಕೊಟ್ಟಿದ್ದರು. ಮದುವೆಯಾದ ಆರು ತಿಂಗಳಿಗೆ ಅವಳು ತೀರಿಕೊಂಡಳು. ಅವಳ ಅಣ್ಣ ಮಾಧು ಮೈಸೂರಿನಲ್ಲಿ ಬಿ.ಎ ಮಾಡುತ್ತಿದ್ದ. ತಂದೆಯ ಹಾಗೆ ನೋಡಲು ಚೆನ್ನಾಗಿದ್ದ, ಓದಿನಲ್ಲೂ ತುಂಬಾ ಜಾಣ.

Ich drängte ihn, mir die Geschichte gleich zu erzählen.

Er machte es sich bequem und fing zu reden an: „Na gut. Das Haus gehörte Herrn Balekaayi Subbarao. Er hatte einen Sohn und eine Tochter. Seine Tochter heiratete den Sohn des Grundherrn aus dem Städtchen Honnuru. Sechs Monaten danach ist sie gestorben. Ihr Bruder Maadhu machte sein Bakkalaureus Studium in Mysuru.

Er war gutaussehend wie sein Vater. Er war auch gut in seinem Studium.

ಮಗಳ ಮರಣದ ನಂತರ ಸುಬ್ಬರಾಯರಿಗೆ ಮಗನ ಮೇಲೆ ಹೆಚ್ಚು ಪ್ರೀತಿ. ಮಾಧೂ ಕೂಡ ತಂದೆ ಎಂದರೆ ಎಲ್ಲಿಲ್ಲದ ಗೌರವ.

ಮಾಧು ಮೈಸೂರಿಗೆ ಓದಲು ಹೋದ ಒಂದು ವರುಷದ ನಂತರ ನಮ್ಮ ಊರಿನ ಸುಬ್ಬಣ್ಣನವರ ಮಗ ಮೈಸೂರಿಗೆ ತೆರಳಿದ. ಒಂದೆ ಊರಿನವರಾದ್ದರಿಂದ ಸ್ನೇಹ ಬೆಳೆಯಿತು. ಒಂದೆ ಕೊಠಡಿಯಲ್ಲಿ ಇರುತ್ತಿದ್ದರು.

ಬೇರೆಬೇರೆ ತರಗತಿಗಳಲ್ಲಿ ಇದ್ದರೂ ಸಹ ಆಟ, ಪಾಠ, ಓದು, ಬರಹಗಳಲ್ಲಿ ಜೊತೆಯಾಗಿ ಇರುತ್ತಿದ್ದರು.

Nach dem Tod seiner Tochter mochte er seinen Sohn noch mehr. Maadhu war ein artiger Junge, der seinen Vater verehrte.

Innerhalb eines Jahres nachdem Maadhu nach Mysuru umgezogen war, ging der Sohn von Herrn Subbanna aus unserem Dorf nach Mysuru für sein Studium . Da die beiden aus dem selben Dorf gekommen waren, wurden Sie dicke Freunde. Sie teilten ein Zimmer.

Obwohl sie in unterschiedlichen Klassen waren, verstanden sie sich gut und unternahmen vieles gemeinsam.

ಮಾಧುವಿನ ಸಹಪಾಠಿ ಶಾರದೆ. ನೋಡಲು ತುಂಬಾ ಲಕ್ಷಣವಂತೆ. ಮಾಧುವಿಗೆ ಅವಳ ಮೇಲೆ ಪ್ರೀತಿ ಉಂಟಾಯಿತು. ದಿನಗಳು ಕಳೆದಂತೆ ಅವನಿಗೆ ಅವಳನ್ನು ಮದುವೆಯಾಗುವ ಬಯಕೆ ಬಲವಾಯಿತು.

ಮಾಧು ತನ್ನ ಸ್ನೇಹಿತನಿಗೆ ತನ್ನ ಮನದಾಸೆಯನ್ನು ತಿಳಿಸಿದ. ಅವನು ಮಾಧುಗೆ ಹಾಸ್ಯ ಮಾಡಿ "ತೆಳ್ಳಗೆ, ಬೆಳ್ಳಗೆ ಇರುವ ಸುಂದರ ಹುಡುಗಿಯರನ್ನೆಲ್ಲಾ ಮದುವೆ ಆಗಲು ಸಾಧ್ಯವೇನೊ ಮಾಧು" ಎಂದು ಗೇಲಿ ಮಾಡಿದ.

Eine Klassenkameradin Maadhus hieß Sharada. Sie war ein zierliches Mädchen. Er verliebte sich in sie. Mit der Zeit wuchs seine Liebe für sie und er wollte sie heiraten.

Er äußerte seinem Freund gegenüber seinen Wunsch, und dieser machte sich darüber lustig und fragte Maadhu scherzhaft, „ist es möglich, dass du denkst, dass du alle schön aussehenden Mädchen heiraten kannst?“

ಆದರೆ ಅವನಿಗೂ ಶಾರದೆಯ ರೂಪ ಮೆಚ್ಚಿಗೆ ಆಯಿತು, ಪ್ರೀತಿ ಉಂಟಾಯಿತು.

ಮಾಧು ಶಾಲೆ ತಪ್ಪಿಸಲು ಪ್ರಾರಂಭಿಸಿದ. ಯಾವಾಗಲೂ ಶಾರದೆಯ ಮನೆ ಬೀದಿಯಲ್ಲಿ ಓಡಾಡುತ್ತಿದ್ದ. ಓದಿನಲ್ಲಿ, ಆಟಗಳಲ್ಲಿ ಕೂಡ ಆಸಕ್ತಿ ಕಳೆದು ಕೊಂಡ. ಯಾರ ಮಾತಿಗೂ ಕಿವಿ ಕೊಡುತ್ತಿರಲಿಲ್ಲ. ಅವನ ಸ್ನೇಹಿತನಿಗೆ ಯೋಚನೆ ಆಯಿತು.

ಮಾಧುವಿನ ನಡವಳಿಕೆಯ ಬಗ್ಗೆ ಕೂಲಂಕುಶವಾಗಿ ಸುಬ್ಬರಾಯರಿಗೆ ಪತ್ರ ಬರೆದ.

ಅವರು ತಕ್ಷಣವೆ ಬುದ್ದಿವಾದ ಹೇಳಿ ಮಗನಿಗೆ ಕಾಗದ ಬರೆದರು.

Eigentlich war er selbst von Sharadas Schönheit gefangengenommen. Auch er hatte sich in sie verliebt.

Maadhu begann die Stunden zu schwänzen. Tag und Nacht ging er in der Straße auf und ab, wo Sharda wohnte. Er verlor Interesse an Sport und Studium. Viele rieten ihm zu Vernunft. Das war alles umsonst. Sein Freund war auch bekümmert.

Er schrieb an Herrn Subbarao einen ausführlichen Brief und beschrieb das Verhalten von Maadhu.

Sofort schrieb sein Vater Maadhu und forderte ihn auf, sich zusammenzunehmen.

ಮಾಧುವಿಗೆ ತನ್ನ ಒಡನಾಡಿಯ ಮೇಲೆ ವಿಪರೀತ ಕೋಪ ಬಂತು. ಇಬ್ಬರ ಮಧ್ಯೆ ಮಾತುಕಥೆ ನಿಂತು ಹೋಯಿತು. ಕೆಲವು ದಿನಗಳ ಮೇಲೆ ಬೇರೆ ಬೇರೆ ವಾಸಿಸಲು ಪ್ರಾರಂಭಿಸಿದರು.

ಮಾಧು ಓದದೆ ಇದ್ದರು ಬಿ.ಎ ಪರೀಕ್ಷೆಯಲ್ಲಿ ತೇರ್ಗಡೆಯಾದ. ಅವನ ತಂದೆಗೆ ಪರಮ ಸಂತೋಷ. ಓದು ಮುಗಿಸಿ ಊರಿಗೆ ಹಿಂದಿರುಗಿದ. ಆ ಕಾಲದಲ್ಲಿ ಪದವೀಧರನಾಗುವುದು ದೊಡ್ಡ ವಿಷಯ. ಪದವಿ ಬಂದ ನಂತರ ಜಂಬ ಬರುವುದು ಸಹಜ. ಆದರೆ ಮಾಧು ಇದಕ್ಕೆ ಹೊರತು. ಊರಿನ ಹಿರಿಯರು ಮತ್ತು ಕಿರಿಯರ ಜೊತೆ ಸರಳವಾಗಿ ಬೆರೆಯುತ್ತಿದ್ದ. ತಂದೆಗೆ ಮಗನ ಮದುವೆ ಮುಗಿಸಿ ಜವಾಬ್ದಾರಿ ಕಳೆದುಕೊಳ್ಳುವ ಆಸೆ.

Obwohl Maadhu sein Studium vernachlässigt hatte, bestand er seine Endprüfung. Sein Vater war außer sich vor Freude. Nach seinem Studium kehrte er zurück in sein Städtchen. Damals war es ein großes Ding, die B.A Klausur zu bestehen. Es war ganz normal, dass die Leute mit einem Hochschulabschluss stolz wurden. Maadhu war eine Ausnahme. Er verkehrte mit allen, ob jung oder alt gleichermaßen. Sein Vater war begierig, seiner Verantwortung nachzukommen, indem er die Hochzeit seines Sohnes möglichst bald feiern wollte.

ಮಾಧುವಿಗೆ ತನ್ನ ಪ್ರೀತಿಯ ಬಗ್ಗೆ ತಂದೆಗೆ ಹೇಳಲು ಅಂಜಿಕೆ. ಕೊನೆಗೆ ಧೈರ್ಯ ಮಾಡಿ ಹೇಳಿದ. ಸುಬ್ಬರಾಯರು ಬೇರೆ ಸಂಬಂಧಗಳ ಬಗ್ಗೆ ಮಾತನಾಡಿದರೆ ಮಾಧು ತನ್ನ ಹಠ ಬಿಡಲಿಲ್ಲ. ಕೊನೆಗೆ ರಾಯರೆ ಸೋಲಬೇಕಾಯಿತು. ಅವರು ಮೈಸೂರಿಗೆ ಹೋಗಿ ಶಾರದೆಯ ತಂದೆ ರಾಮರಾಯರನ್ನು ಭೇಟಿ ಮಾಡಿದರು. ಮಾತುಕಥೆಯ ನಂತರ ಅವರು ಮದುವೆಗೆ ಒಪ್ಪಿಕೊಂಡರು.

ಭರದಿಂದ ಸಿದ್ಧತೆಗಳು ಪ್ರಾರಂಭವಾಯಿತು.

ಸ್ವಲ ದಿನಗಳ ನಂತರ ರಾಮರಾಯರು ಸುಬ್ಬರಾಯರಿಗೆ ಚುಟುಕಾದ ಪತ್ರ ಬರೆದು:"ನಿಮ್ಮ ಮಗನಿಗೆ ನನ್ನ ಮಗಳನ್ನು ಕೊಡಲು ಆಗುವುದಿಲ್ಲ"ಎಂದು ತಿಳಿಸಿದರು. ಯಾವ ಕಾರಣವನ್ನೂ ನೀಡಿರಲಿಲ್ಲ.

Maadhu hatte Angst seinem Vater über seine Liebe zu erzählen. Letztlich fasste er Mut und informierte seinem Vater über sein Vorhaben. Subbarao schlug seinem Sohn andere Mädchen vor, aber dieser war nicht bereit von seinem Entschluss abzugehen. Subbarao musste nachgeben und er ging unwillig nach Mysuru und traf Herrn Ramarao, den Vater von Sharada. Nach der Verhandlung willigte der Brautvater in die Heirat ein.

Eifrig wurden die Vorbereitungen für die Hochzeit getroffen.

Nach einigen Tagen schrieb Ramarao einen kurzen Brief an Subbarao und ohne einen Grund zu nennen, gab er an, dass die Hochzeitsfeier storniert worden ist.

ಸುಬ್ಬರಾಯರಿಗೆ ಆಘಾತವಾಯಿತು. ಪತ್ರಗಳನ್ನು ಬರೆದರೆ ಹುಡುಗಿಯ ತಂದೆ ಉತ್ತರ ಕೊಡಲಿಲ್ಲ.

ಮದುವೆ ಗೊತ್ತಾದ ಕೆಲವೆ ದಿನಗಳಲ್ಲಿ ರಾಮರಾಯರಿಗೆ ಒಂದು ಅನಾಮಧೇಯ ಪತ್ರ ಬಂದಿತ್ತು. ಮಾಧುವಿನ ಮೇಲೆ ಇಲ್ಲಸಲ್ಲದ ಸುಳ್ಳು ಆರೋಪಗಳನ್ನು ಮಾಡಿ, ನಿಮ್ಮ ಮಗಳನ್ನು ಮಾಧುವಿಗೆ ಮದುವೆ ಮಾಡಿಕೊಟ್ಟರೆ ಅವಳನ್ನು ನೀವೇ ಬಾವಿಗೆ ತಳ್ಳಿದಂತೆ ಎಂದು.

ಇಂತಹ ಪರಿಸ್ಥಿತಿಯಲ್ಲಿ ಯಾವ ತಂದೆಗೆ ತಾನೆ ಅಂತಹ ಹುಡುಗನಿಗೆ ಮದುವೆ ಮಾಡಿಕೊಡಲು ಧೈರ್ಯ ಬರುತ್ತದೆ ಹೇಳಿ?

Subbarao war außer sich und schockiert. All seine Briefe an den Brautvater blieben unerwidert.

Kurz nach der Festsetzung der Vermählung hatte Ramarao einen anonymen Brief bekommen, in dem man Maadhu verleumdet hatte. In dem Brief stand „Wenn Sie die Hand Ihrer Tochter diesem Mann zur Heirat geben, werden Sie selbst die Zukunft Ihrer Tochter zerstören.“

In so einer Situation ist es nachvollziehbar, dass kein Brautvater Mut fasst und die Hochzeit seiner Tochter mit so einem Mann feiert.

ಶಾರದಳ ತಂದೆ ಪತ್ರದ ಸತ್ಯಾಸತ್ಯತೆಯನ್ನು ಪರೀಕ್ಷಿಸಲಿಲ್ಲ ಮತ್ತು ಸುಬ್ಬರಾಯರ ಪತ್ರಗಳಿಗೆ ಉತ್ತರವನ್ನು ಕೊಡಲಿಲ್ಲ.

ಮಾಧುವಿನ ಆಸೆ ತೀರಲಿಲ್ಲ. ಈ ನಿರಾಶೆಯ ನಂತರ ಯಾರ ಜತೆಯೂ ಬೆರೆಯುತ್ತಿರಲಿಲ್ಲ,ಮಾತನಾಡುತ್ತಿರಲಿಲ್ಲ, ಮೂರು ಹೊತ್ತೂ ಆಕಾಶ ನೋಡಿಕೊಂಡು ಕುಳಿತುಕೊಂಡಿರುತ್ತಿದ್ದ, ಅಥವಾ ತೋಪಿನಲ್ಲಿ ದಿನವಿಡೀ ಗೊತ್ತು ಗುರಿ ಇಲ್ಲದೆ ಓಡಾಡುತ್ತಿದ್ದ. ಮನೆಯ ಹಿಂದೆ ಇದ್ದ ಬಾವಿಕಟ್ಟೆಯ ಮೇಲೆ ಕುಳಿತು ನೀರನ್ನು ನೋಡುತ್ತಾ ಇರುತ್ತಿದ್ದ.

Er hat nicht einmal versucht, die Authentizität des Briefs nachzuprüfen oder die Wahrhaftigkeit des Geschriebenen zu überprüfen. Er weigerte sich, die Briefe von Subbarao zu bestätigen.

Maadhus Wunsch ging also nicht in Erfüllung und er war trostlos. Nach der Enttäuschung vermied er Gesellschaft jeglicher Art. Er sprach mit niemandem, den ganzen Tag blickte er leer in den Himmel, lief ziellos durch das Dorf, oder setzte sich auf den Rand und starrte in das Wasser im Brunnen.

ಸುಬ್ಬರಾಯರು ಮಗನಿಗೆ ಬೇರೆ ಮದುವೆ ಮಾಡಲು ಮಾಡಿದ ಪ್ರಯತ್ನಗಳೆಲ್ಲ ವ್ಯರ್ಥವಾಯಿತು. ಮಗನ ಸಂಕಟವನ್ನು ನೋಡಲಾರದೆ ಕೊರಗುತ್ತ ತೀರಿಕೊಂಡರು. ತಂದೆಯ ಮರಣದ ನಂತರ ಮಾಧುವಿಗೆ ದಿಗ್ಭ್ರಮೆ ಆಗಿ ಕೆಲವು ದಿನಗಳಲ್ಲೆ ಹುಚ್ಚು ಹಿಡಿಯಿತು. ಮನ ಬಂದಂತೆ ಮಾತನಾಡುವುದು, ಜೋರಾಗಿ ಹಾಡುವುದು, ಇಷ್ಟೇ ಇವನ ಕೆಲಸವಾಯಿತು. ಊಟ, ತಿಂಡಿಯ ಬಗ್ಗೆಯೂ ಯೋಚನೆ ಇರಲಿಲ್ಲ.

Subbarao versuchte ohne Erfolg für seinen Sohn eine neue Braut zu finden, aber Maadhu blieb hart. Der Vater konnte die Misere seines Sohns nicht ertragen und starb an Kummer. Der Tod von seinem Vater traf Maadhu sehr tief und er verlor sein Gleichgewicht und wurde binnen kurzem verrückt. Er begann zusammemhanglos zu reden. Vor sich hin zu lachen und laut zu singen wurden seine täglichen Beschäftigungen. Sich zu ernähren war für ihn nicht von Belang.

ಇದಾದ ಸ್ವಲ್ಪ ದಿನಗಳ ನಂತರ ಅವನ ಸ್ನೇಹಿತ ಓದು ಮುಗಿಸಿಕೊಂಡು ಮೈಸೂರಿನಿಂದ ಊರಿಗೆ ಹಿಂದಿರುಗಿದ. ಅವನ ಮದುವೆ ಮಾಧುವಿಗೆ ಗೊತ್ತಾಗಿದ್ದ ಹುಡುಗಿ ಶಾರದೆಯ ಜೊತೆ ಆಗಿತ್ತು. ಮಾಧುವಿನ ಪರಿಸ್ಥಿತಿ ಬಗ್ಗೆ ವಿಷಯ ತಿಳಿದಿತ್ತು.

ಊರಿಗೆ ಹಿಂದಿರುಗಿದ ಕೆಲವೇ ದಿನಗಳಲ್ಲಿ ರಸ್ತೆಯಲ್ಲಿ ಮಾಧುವಿನ ಭೇಟಿ ಆಯಿತು. ಅವನು ಒಮ್ಮೆಗೆ "ಈ ಬಾರಿ ಕಿತ್ತುಕೊಂಡೆ, ಮುಂದಿನ ಸಲ...." ಎಂದು ಹೇಳಿ ಗಹಗಹಿಸಿ ನಗುತ್ತ ಓಡಿಹೋದ. ಸ್ನೇಹಿತನ ಮುಖ ಪೆಚ್ಚಾಯಿತು.

ಅಲ್ಲಿಯೆ ಇದ್ದ ಹಲವರು "ಅವರ ಮಾತನ್ನು ಮನಸ್ಸಿಗೆ ತೆಗೆದುಕೊಳ್ಳಬೇಡಿ ಸ್ವಾಮಿ, ಅವನು ಹುಚ್ಚ. ದೇವರಂತಹ ಮನುಷ್ಯ, ಆದರೆ ಈಗ ಹೇಗಾಗಿದ್ದಾನೆ ನೋಡಿ. ದೇವರಿಗೆ ಕಣ್ಣಿಲ್ಲ" ಎಂದು ಬೇಸರಿಸಿಕೊಂಡರು.

Kurze Zeit, nachdem Maadhu nicht mehr bei Sinnen war, kehrte sein ehemaliger Freund aus Mysuru zurück. Er hatte das Mädchen, das Maadhus Frau hätte sein sollen, geheiratet. Er war sich bewusst, dass Maadhu deswegen seinen Kopf verloren hatte.

Binnen weniger Tage nach seiner Heimkehr traf er Maadhu einmal auf der Straße. Maadhu sagte einfach „dieses Mal hast du mir etwas geraubt, aber das nächste Mal...“ und lief laut lachend davon. Der Freund war deprimiert.

Die herumstehenden Menschen trösteten ihn und sagten: "achten Sie nicht auf das, was er sagt. Er ist sowieso irre. Er war wahrlich ein netter Kerl. Sehen Sie, was mit ihm passiert ist. Der liebe Gott ist wirklich erbarmungslos.“

ಮಾಧುವಿಗೆ ಹುಚ್ಚು ಹಿಡಿಯಲು ನಾನೆ ಕಾರಣವೇನೊ ಎಂದು ತೋರಿತು. ಖಿನ್ನ ಮನಸ್ಕನಾಗಿ ಮನೆಗೆ ಹಿಂದಿರುಗಿದ.

ಮಾಧುವಿನ ಬುದ್ಧಿಭ್ರಮೆ ಸರಿಯಾಗಲೆ ಇಲ್ಲ. ಹೀಗಿರುವಾಗ ಒಂದು ದಿನ ಅವನು ಆಕಸ್ಮಿಕವಾಗಿ ತನ್ನ ಸ್ನೇಹಿತನ ಮಡದಿಯನ್ನು ದಾರಿಯಲ್ಲಿ ನೋಡಿ ಗರ ಬಡೆದವನಂತೆ ನಿಂತುಬಿಟ್ಟ.

ಅವಳನ್ನು ಕಂಡ ತಕ್ಷಣ ಮಂಕು ಕವಿದಿದ್ದ ಮನಸ್ಸು ತಿಳಿಯಾಯಿತು. ತನ್ನ ಸಹಪಾಠಿ ಶಾರದಳನ್ನು ತಕ್ಷಣವೆ ಗುರುತು ಹಿಡಿದ. ಬಿಸಿಲು ಬಂದ ಕೂಡಲೇ ಮಂಜು ಕರಗಿ ಎಲ್ಲವೂ ಸ್ಪುಠವಾಗಿ ಗೋಚರವಾಗುವ ಹಾಗೆ ಮಾಧುಗೆ ಗೊತ್ತಾಯಿತು. ಶಾರದಳೊಡನೆ ತನ್ನ ಮದುವೆ ಆಗದೆ ಇರಲು ತನ್ನ ಸ್ನೇಹಿತನೇ ಕಾರಣ ಎಂದು ಮನವರಿಕೆ ಆಯಿತು.

Der Freund fragte sich, ob er Schuld an dem Zustand Maadhus war und machte sich schweren Herzens auf den Weg nach Hause.

Es ging Maadhu nie wieder gut. Als er ziellos auf den Straßen herumirrte, traf er zufällig an einem Tag die Frau von seinem ehemaligen Freund und blieb regungslos stehen.

Sobald er sie ansah, blieb er angewurzelt wie von einem Blitz getroffen stehen. Ihr Anblick klärte seinen benebelten Geist. Er erkannte seine Klassenkameradin Sharada und es war, wie wenn der Sonnenschein den Nebel auflöste und ihm wurde auf einmal alles klar und er erkannte augenblicklich, dass sein Freund für die Absage seiner Trauung verantwortlich war.

ಅವನು ಅರಿವಿಲ್ಲದೆ "ಶಾರದ" ಎಂದು ಮೆತ್ತಗೆ ಹೇಳಿದ. ಶಾರದೆಗೆ ಅವನ ಗುರುತು ಹತ್ತಿತು ಮತ್ತು ಅವನಿಗೆ ಬುದ್ಧಿಭ್ರಮೆ ಆಗಿದೆ ಎಂದು ಗೊತ್ತಾಗಿತ್ತು. ಹೆದರಿಕೊಂಡು ಬೇಗ ಅಲ್ಲಿಂದ ತಪ್ಪಿಸಿಕೊಂಡು ಹೋಗಲು ಪ್ರಯತ್ನಿಸಿದಳು.

ಮಾಧು ಅವಳ ದಾರಿಗೆ ಅಡ್ಡ ಬಂದು "ಶಾರದ, ನೀನು ಹೋಗಲು ನನ್ನ ಅಡ್ಡಿ ಏನೂ ಇಲ್ಲ. ಆದರೆ ಹೋಗುವ ಮೊದಲು ನನಗೆ ಒಂದು ವಿಷಯ ತಿಳಿಸಿಹೋಗು".

ಅವನ ಮಾತುಗಳು ಹುಚ್ಚನ ಮಾತಿನಂತೆ ಇರಲಿಲ್ಲ. ಅವನ ಅಂತರಾಳದಿಂದ ಬಂದ ನೋವಿನ ಮಾತಾಗಿತ್ತು. ಶಾರದ ಮೌನವಾಗಿ ಒಂದು ಕಡೆ ನಿಂತಳು.

Ohne zu wissen, sagte er leise: „Sharada.“ Sie erkannte ihn sofort. Sie erinnerte sich, dass er verrückt geworden war. Sie hatte Angst vor ihm und versuchte, ihm zu entkommen.

Aber Maadhu versperrte ihr den Weg und sagte: „Sharada, ich habe nichts dagegen, dass du weggehst. Aber kannst du mir, bevor du weggehst, eines erklären?“

Seine Rede klang nicht wie von einem Verrückten. Die Worte kamen aus den Tiefen seiner gequälten Seele. Sharada stand schweigsam an der Seite.

ಹಲವು ಕ್ಷಣ ಮಾಧು ಕೂಡ ಏನೂ ಹೇಳಲಿಲ್ಲ.

"ನಮ್ಮ ಮದುವೆಯನ್ನು ಹಠಾತ್ತಾಗಿ, ಯಾವ ಕಾರಣಗಳನ್ನೂ ಕೊಡದೆ ನಿಲ್ಲಿಸಿದ್ದೇಕೆ?"

ಶಾರದ ಹೇಳುವುದೊ,ಬೇಡವೊ ಎಂದು ಆಲೋಚನೆ ಮಾಡಿ

"ನಮ್ಮ ತಂದೆಗೆ ಮದುವೆಗೆ ಸ್ವಲ್ಪ ದಿನಗಳ ಮುಂಚೆ ಒಂದು ಅನಾಮಧೇಯ ಪತ್ರ ಬಂತು. ಅದರಲ್ಲಿ ನಿನ್ನ ನಡತೆ ಚೆನ್ನಾಗಿಲ್ಲ, ನಿನಗೆ ಕೆಟ್ಟ ಚಾಳಿಗಳಿವೆ ಎಂದೆಲ್ಲ ಬರೆದಿತ್ತು. ನನ್ನ ತಂದೆ ಅದನ್ನು ನಂಬಿ ಹೆದರಿಕೊಂಡು ಮದುವೆಯನ್ನು ನಿಲ್ಲಿಸಿಬಿಟ್ಟರು".

Es dauerte eine Weile, bevor er wieder zu sprechen begann. „Warum wurde unsere Hochzeit ohne Grund abgesagt?“

Sharada dachte darüber nach, ob sie etwas sagen sollte oder einfach schweigen sollte.

Nach kurzer Überlegung sagte sie:

„Kurz vor dem Tag der Heirat erhielt mein Vater einen anonymen Brief. Darin stand, dass dein Charakter fragwürdig sei und dass du schlechte Angewohnheiten hättest. Mein Vater traute dem Geschriebenen und vor Angst sagte er die Hochzeit ab.“

ಮಾಧು ಧೀರ್ಘವಾಗಿ ಉಸಿರು ತೆಗೆದು ಕೊಂಡು ಪ್ರಶ್ನಿಸಿದ"ನೀನು ಆ ಪತ್ರದಲ್ಲಿ ಬರೆದಿದ್ದನ್ನು ನಂಬಿದೆಯ"?

"ನಾನೇನೊ ನಂಬಲಿಲ್ಲ, ಆದರೆ......".

"ಆ ಪತ್ರದಲ್ಲಿರುವ ಆರೋಪಗಳೆಲ್ಲ ಸುಳ್ಳು ಎಂದು ನೀನು ನಿಮ್ಮ ತಂದೆಗೆ ಹೇಳಲಿಲ್ಲವೆ"?

"ನಾನು ಯಾರೋ ಹೊಟ್ಟೆಉರಿಯಿಂದ ಹೀಗೆಲ್ಲ ಸುಳ್ಳು ಬರೆದಿದ್ದಾರೆ” ಎಂದು ಹೇಳಿದೆ. ಆದರೆ ಅವರು ತಮ್ಮ ನಿರ್ಧಾರ ಬದಲಿಸಲಿಲ್ಲ. ನಾನು ತಾನೆ ಏನು ಮಾಡಲಿ? ಅವರ ಮಾತನ್ನು ಕೇಳಲೇಬೇಕಾಯಿತು".

Maadhu atmete tief ein und fragte, „hast du alles, was im Brief stand, geglaubt?“

„Nein, ich hab’s nicht geglaubt, aber….“.

„Hast du deinem Vater nicht gesagt, dass der Brief voller Lügen war?“

„Doch, ich sagte ihm, dass jemand aus Eifersucht diese Unwahrheiten erzählt hätte, aber er war nicht bereit zuzuhören. Er ließ sich nicht von seinem Entschluss abbringen. Was hätte ich nur machen sollen? Ich musste ihm gehorchen.“

"ನೋಡು ಶಾರದ, ನಿನಗೆ ಗೊತ್ತಾ, ನಾನು ನಿನ್ನನ್ನು ಎಷ್ಟು ಪ್ರೀತಿಸುತ್ತಿದ್ದೆ ಎಂದು?"

"ಅದರ ಬಗ್ಗೆ ನೀನು ಏನೂ ಹೇಳಬೇಡ, ಏಕೆಂದರೆ ನಾನು ನಿನಗೆ ಈಗ ..."

"ಪರಸ್ತ್ರಿ! ಅದಕ್ಕೆ ನಾನು ಹೇಳಿದ್ದು: ಪ್ರೀತಿಸುತ್ತಿದ್ದೆ ಎಂದು. ನೀನಿದ್ದಿದ್ದರೆ ನನಗೆ ಬದುಕು ಬೇಕಿತ್ತು. ನೀನಿಲ್ಲದ ಮೇಲೆ ಈ ದೇಹ ದೇವರ ವಿಗ್ರಹ ಇಲ್ಲದ ದೇವಾಲಯದಂತೆ".

ಶಾರದ ಏನಾದರು ಹೇಳುವ ಮುಂಚೆ ಮಾಧು ಹಿಂತಿರುಗಿ ನೋಡದೆ ಅಲ್ಲಿಂದ ಹೊರಟು ಹೋದ.

ಹಲವು ಕಾಲ ಅವನು ಯಾರ ಕಣ್ಣಿಗೂ ಬೀಳಲಿಲ್ಲ. ಊರಿನ ಜನ ಮಾಧು ಎಲ್ಲೊ ಕಾಣಿಸಿಕೊಳ್ಳುತ್ತಿಲ್ಲವಲ್ಲ ಎಂದುಕೊಂಡರು.

„Sharada, wusstest du nicht, wie sehr ich dich geliebt habe?“

„Du sollst darüber nichts reden, jetzt bin ich für dich...“

„….nichts als eine verheiratete Frau. Ich habe gesagt: ich liebte.

Mein Leben wäre es wert gewesen, gelebt zu werden, nur wenn ich dich gehabt hätte. Mein Leib ist wie ein Tempel ohne das Idol Gottes.... Leer.“

Bevor Sharada ihm erwidern konnte, drehte er sich um und verschwand ohne einen Blick zurück.

Eine Weile war er nicht mehr im Dorf zu erblicken. Nach einiger Zeit fingen die Einwohner sich zu fragen an, wo Maadhu sein konnte.

ಇನ್ನೂ ಹಲವು ದಿನಗಳು ಕಳೆದ ಮೇಲೆ ಯಾರೋ ಅವನ ಮನೆ ಬಳಿ ಹೋದರು. ಅಲ್ಲಿ ಅವರಿಗೆ ಆಘಾತವೆ ಕಾದಿತ್ತು. ಮನೆಯ ಹಿಂಭಾಗದಲ್ಲಿದ ಬಾವಿಯಲ್ಲಿ ಮಾಧುವಿನ ಶವ ತೇಲುತ್ತಿತ್ತು. ಅವನ ಮರಣದ ಸುದ್ದಿ ಕಾಳ್ಗಿಚ್ಚಿನಂತೆ ಊರಲ್ಲೆಲ್ಲ ಹರಡಿತು.

ಎಲ್ಲರ ಬಾಯಲ್ಲೂ "ಇಷ್ಟು ಒಳ್ಳೆಯವನಿಗೆ ಎಂತಹ ಮರಣ " ಎಂಬ ಮಾತು.

ಅವನ ಶವಸಂಸ್ಕಾರ ಎಲ್ಲಾ ಮುಗಿಯಿತು. ಆ ಮನೆಗೆ ಯಾವ ವಾರಸುದಾರರು ಇರಲಿಲ್ಲ. ಅಂದಿನಿಂದ ಅದು ಪಾಳು ಬಿದ್ದಿದೆ.

ಊರಿನವರು ಅಲ್ಲಿ ದೆವ್ವ, ಭೂತ ಇದೆ ಎಂದು ಮಾತನಾಡಲು ಪ್ರಾರಂಭಿಸಿದರು.

Erst nach weiteren Tagen ging jemand zu seinem Haus im Mangohain. Da wartete ein großer Schock. Im Brunnen hinter dem Haus trieb Maadhus Leiche. Diese Nachricht verbreitete sich wie ein Waldbrand in dem Dorf.

Alle sagten: „Was für ein Tod für so einen guten Menschen!“

Die Feuerbestattung fand statt. Es gab keine Erben fürs Haus im Hain. Seitdem ist es verfallen.

Die Einwohner des Dorfes begannen zu sagen, dass es ein Spukhaus sei.

"ಆದರೆ ಅದೆಲ್ಲ ಸುಳ್ಳು, ದೆವ್ವವೂ ಇಲ್ಲ, ಭೂತವೂ ಇಲ್ಲ, ಎಲ್ಲ ನಮ್ಮ ಮನಸ್ಸಿನ ಭ್ರಮೆ" ಎಂದು ಶಾಮಣ್ಣ ಅವರು ತಮ್ಮ ಕಥೆ ಮುಗಿಸಿದರು.

ಕಥೆಯೇನೊ ಮುಗಿಯಿತು,ಆದರೆ ತುಂಬ ಪ್ರಶ್ನೆಗಳು ಉಳಿದಿದ್ದವು. ಕಥೆ ಹೇಳುತ್ತಿದ್ದಾಗ ಹಲವಾರು ಬಾರಿ ಶಾಮಣ್ಣನವರ ಧ್ವನಿ ನಡುಗುತ್ತಿತ್ತು, ಕೆಲವು ಬಾರಿ ಹೇಳುವುದನ್ನೆ ನಿಲ್ಲಿಸುತ್ತಿದ್ದರು.

ಕೆಲವೊಮ್ಮೆ ಉದ್ವೇಗದಿಂದ ಮಾತನಾಡುತ್ತಿದ್ದರು. ಒಟ್ಟಿನಲ್ಲಿ ಅವರಿಗೆ ಹೇಳಲು ತುಂಬಾ ಯಾತನೆ ಆಗುತ್ತಿದ್ದಂತೆ ಗೋಚರಿಸುತ್ತಿತ್ತು.

Shamanna beendente seine Erzählung mit den Worten:

„Das ist alles Geflunker. Es gibt weder Gespenster noch den Teufel. Alles ist unsere Einbildung oder Wahnvorstellung.“

Zwar war die Geschichte zu Ende, aber es blieben viele unbeantwortete Fragen. Shamannas Stimme zitterte, wenn er die Geschichte schilderte. Manchmal legte er lange Pausen ein und schwieg.

Ab und zu sprach er schnell und erregt. Alles in allem sah es so aus, dass es ihm schwer fiel zu reden und dass es ihn unendlich schmerzte, über das Geschehen zu sprechen.

ನನ್ನ ನಾಲಿಗೆಯ ತುದಿಯಲಿದ್ದ ಪ್ರಶ್ನೆಯನ್ನು ಕೇಳಲೊ, ಬೇಡವೊ ಎಂದು ಯೋಚನೆ ಮಾಡಿ ಕೊನೆಗೆ

"ಮಾಧುವಿನ ಸ್ನೇಹಿತ ಎಂದು ಹೇಳಿದಿರಲ್ಲ ಅವನು ಯಾರು, ಈಗ ಎಲ್ಲಿದ್ದಾನೆ? " ಎಂದು ಕೇಳಿದೆ.

ಅವರು ಹಲವು ಸಮಯ ಅಧೋಮುಖರಾಗಿ ಕುಳಿತು ನಂತರ ಮೆತ್ತನೆ

"ಅವನು ಬೇರೆಲ್ಲೂ ಇಲ್ಲ, ನಿಮ್ಮ ಎದುರಿಗೆ ಇದ್ದಾನೆ" ಎಂದರು.

ನನಗೆ ಸಿಡಿಲು ಬಡಿದಂತೆ ಆಯಿತು. ಏನು ಹೇಳಲೂ ತೋಚಲಿಲ್ಲ. ನಿಧಾನವಾಗಿ ಕೇಳಿದೆ "ಹಾಗಿದ್ದರೆ ಆ ಅನಾಮಧೇಯ ಪತ್ರ ಬರೆದವರು ನೀವೆ ಏನು? ಈ ವಿಷಯ ನಿಮ್ಮ ಮನೆಯವರಿಗೆ ಗೊತ್ತಾ?".

Ich überlegte, ob ich die Frage, die auf meiner Zunge lag, stelle oder nicht.

Endlich stellte ich die Frage:

„Sie haben von dem Freund von Maadhu gesprochen, und wer ist das und wo ist er jetzt?“

Mit gebeugtem Kopf saß er eine Zeitlang da und dann sagte er leise:

„Er ist nirgendwo anders, er sitzt vor Ihnen.“

Ich fühlte, als träfe mich ein Blitzschlag. Ich konnte nichts sagen.

Langsam fragte ich ihn: „Haben Sie den anonymen Brief geschrieben? Weiss ihre Frau diese Tatsache?“

ಅವರು ಮತ್ತೆ ಮಾತನಾಡಲು ಪ್ರಾರಂಭಿಸಿದಾಗ ಅವರ ಧ್ವನಿಯಲ್ಲಿ ಉದ್ವೇಗ ಇರಲಿಲ್ಲ, ಕೇವಲ ಹತಾಶ ಭಾವನೆ ಇತ್ತು.

"ಇಲ್ಲ, ಈ ನನ್ನ ನೀಚ ಕೃತ್ಯ ಯಾರಿಗೂ ಗೊತ್ತಿಲ್ಲ. ಆಗ ನಾನು ಕೇವಲ ನನ್ನ ಸ್ವಾರ್ಥದ ಬಗ್ಗೆ ಮಾತ್ರ ಆಲೋಚನೆ ಮಾಡಿದೆ. ಶಾರದೆಯ ಮೇಲಿನ ಪ್ರೀತಿಯಿಂದ ಬೇರೊಬ್ಬನ ಸಂತೋಷಕ್ಕೆ ಕಲ್ಲು ಹಾಕಿದೆ. ಇಷ್ಟರಲ್ಲೆ ಒಂದು ದಿನ ಅವಳಿಗೆ ಎಲ್ಲವನ್ನೂ ಹೇಳಿ ಕ್ಷಮೆ ಯಾಚಿಸುತ್ತೇನೆ".

ಅವರ ಮಾತು ಇನ್ನೂ ಮುಗಿದಿರಲಿಲ್ಲ ಅಷ್ಟರಲ್ಲೆ ಯಾರೊ ನಿಟ್ಟುಸಿರು ಬಿಟ್ಟಿದ್ದು ಕೇಳಿಸಿತು.

Als er wieder zusprechen begann, war seine Stimme nicht mehr erregt, aber sie klang voller Verzweiflung.

„Nein, niemand weiß Becheid von meiner schäbigen Tat. Damals habe ich nur an mich und meinen Eigennutz gedacht. Da ich mich sehr in Sharada verliebt hatte, war ich bereit, das Glück des anderen zu zerstören. Eines Tages werde ich ihr meine Sünde beichten und sie um Verzeihung bitten.“

Bevor er sein Diskurs beendete, hörte er einen tiefen Seufzer.

ಶಾಮಣ್ಣನವರು ಮಾತು ನಿಲ್ಲಿಸಿ ಹಿಂದಿರುಗಿ ನೋಡಿದರು. ನಾನೂ ಆ ದಿಕ್ಕಿಗೆ ತಿರುಗಿದಾಗ ಕಿಟಕಿಯ ಬಳಿ ಅವರ ಪತ್ನಿ ಶಾರದಮ್ಮ ನಿಂತಿದ್ದು ಕಾಣಿಸಿತು.

"ಯಾಕೆ ಶಾರದ, ನಿದ್ದೆ ಬರಲಿಲ್ಲವೆ?" ಎಂದು ಮೆತ್ತಗೆ ಕೇಳಿದರು.

"ಇಲ್ಲ, ಬಾಗಿಲು ಹಾಕಲು ಬಂದೆ. ಶಾರದ ಎಂದ ಹಾಗೆ ಆಯಿತು. ಏನೊ ಅಂತ ನಿಂತೆ".

"ಹಾಗಿದ್ದರೆ ನಾನು ಹೇಳಿದ್ದೆಲ್ಲ ನಿನಗೆ ಕೇಳಿಸಿರಬೇಕು. ಯಾವಾಗಲಾದರು ನಿನಗೆ ಹೇಳಲೇಬೇಕಿತ್ತು".

Shamanna hörte zu sprechen auf und wandte sich um und ich drehte mich auch um und wir nahmen gleichzeitig wahr, dass Sharada still am Fenster stand.

Er fragte sie leise „ Konntest du nicht schlafen?“

„Nein, Ich wollte die Tür schließen. Ich dachte, dass ich gehört habe, wie jemand meinen Namen nannte. Also wollte ich wissen worum es ging.“

„Dann hast du wahrscheinlich alles gehört, was ich bis jetzt erzählt habe. Irgendwann hätte ich dir alles erzählen müssen.“

ನನ್ನ ಕಡೆ ತಿರುಗಿ "ನಾನು ನಿಮಗೆ ಹೇಳಿರಲಿಲ್ಲವೆ, ದೊಡ್ಡ ಕಥೆ ಎಂದು. ತುಂಬ ತಡವಾಗಿದೆ, ಮಲಗಿ" ಎಂದರು.

"ನೀವು ಹೋಗಿ ಮಲಗಿ, ನನಗೆ ಇನ್ನೂ ನಿದ್ದೆ ಬಂದಿಲ್ಲ" ಅಂದೆ.

ಅವರು ಹೋದ ಮೇಲೆ ತುಂಬ ಸಮಯ ಜಗಲಿಯ ಮೇಲೆ ಕುಳಿತು ಅವರು ಹೇಳಿದ್ದನ್ನೆಲ್ಲ ಮೆಲಕು ಹಾಕುತ್ತ, ಮನುಷ್ಯರ ಸ್ವಭಾವದ ಬಗ್ಗೆ ಆಲೋಚನೆ ಮಾಡುತ್ತಾ ಕುಳಿತಿದ್ದೆ.

ಸುಮಾರು ಎರಡೂವರೆ ಗಂಟೆಗೆ ಎದ್ದು ಮಲಗಲು ಹೋದೆ.

Er sah mich an und sagte: „Hab ich Ihnen nicht gesagt, dass es eine lange Geschichte ist. Es ist schon spät. Gehen Sie schlafen.“

„Gehen Sie schlafen. Ich bin noch nicht schläfrig“.“

Nachdem er gegangen war, saß ich auf dem Säulengang und dachte an das, was Shamanna erzählt hatte und grübelte ziemlich lange über die menschlichen Charaktere.

Als es zwei Uhr dreißig früh morgens war, ging ich in das Haus, um zu schlafen.

ಮರುದಿನ ನಾನು ಏಳುವಷ್ಟರಲ್ಲಿ ಶಾಮಣ್ಣನವರು ಸ್ನಾನ ಮುಗಿಸಿ ದೇವರ ಮನೆಯಲ್ಲಿ ಕುಳಿತು ಜಪ ಮಾಡುತ್ತಿದ್ದರು.

ನಾನು ಬಂದಿದ್ದನ್ನು ನೋಡಿ ತುಂಬ ನೋವಿನಿಂದ ಹೇಳಿದರು

"ಅವನನ್ನು ನೆನೆಯದ ದಿವಸ ಇಲ್ಲ, ಅವನು ಸತ್ತು ಬದುಕಿದ. ನಾನು ಮನದ ಬೇಗುದಿಯಿಂದ ದಿನಂಪ್ರತಿ ಸಾಯುತ್ತಿದ್ದೇನೆ".

ಅದನ್ನು ಹೇಳುವಾಗ ಕಾಣಿಸದ ಹಾಗೆ ಕಣ್ಣೀರನ್ನು ಒರೆಸಿಕೊಂಡರು. ಶಾರದಮ್ಮನವರ ಕಣ್ಣುಗಳಲ್ಲೂ ನೀರು ತುಂಬಿತ್ತು. ಶಾಮಣ್ಣನವರ ಮುಖದಲ್ಲಿ ದೈನ್ಯ ಭಾವ ಹಾಗೂ ಪಶ್ಚಾತ್ತಾಪ ಎದ್ದು ಕಾಣಿಸುತ್ತಿತ್ತು.

ಬಹುಶಃ ದೇವರು ಅವರನ್ನು ಕ್ಷಮಿಸಬಹುದು ಅನ್ನಿಸಿತು.

Bevor ich am nächsten Morgen aufgestanden war, hatte Shamanna schon gebadet und saß im Gebetsraum und betete.

Er sah mich kommen und sagte voller Schmerz:

„Kein Tag vergeht, ohne dass ich an ihn denke. Zwar ist er gestorben, aber er lebt weiter. Aber ich...? Ich bin am Leben, aber ich sterbe tagtäglich an Folterqualen!“

Als er seine seelische Qual offenbarte, kamen Tränen in seine Augen, die er unauffällig wegwischte. Sharadas Augen waren voller Tränen. In Shamannas Gesicht konnte man die äußerste Misere und Reue klar sehen.

Ich dachte, vielleicht wird Gott ihm verzeihen.

ನಾನು ಬಂದಿದ್ದ ಕೆಲಸ ಮುಗಿಸಿಕೊಂಡು ಬರಲು ತಾಲೂಕು ಕಛೇರಿಗೆ ಹೋಗಿ ಬಂದೆ. ಸಂಜೆಯವರೆಗೆ ಶಾಮಣ್ಣನವರ ಮನೆಯಲ್ಲಿ ಇದ್ದು ನಮ್ಮ ಹಳ್ಳಿಗೆ ಹಿಂದಿರುಗಿದೆ.

ಬರುವಾಗ ತೋಪಿನ ಮನೆಯನ್ನು ನೋಡುವ ಆಸೆ ಬಲವಾಗಿದ್ದರೂ ಅಲ್ಲಿಗೆ ಹೋಗಲಿಲ್ಲ.

ದಾರಿಯಲ್ಲಿ ನನ್ನ ಸ್ನೇಹಿತ ಚಂದ್ರು ಸಿಕ್ಕಿದ. ನಾನು ಅವನಿಗೆ ತೋಪಿನ ಮನೆಯಲ್ಲಿ ನಡೆದ ಘಟನೆಗಳ ಬಗ್ಗೆ ಹೇಳಿದೆ.

ಅವನು ಒಂದೆರಡು ನಿಮಿಷ ಸುಮ್ಮನಿದ್ದ. ಆಮೇಲೆ "ಸುಮ್ಮನೆ ಬುರುಡೆ ಹೊಡೆಯಬೇಡ, ಎಲ್ಲೊ ಕನಸು ಕಂಡಿರಬೇಕು" ಎಂದು ಜೋರಾಗಿ ನಕ್ಕ. ನಂಬದವರಿಗೆ ಏನು ಹೇಳುವುದು?

ಹೋಗಲಿ, ನೀವಾದರು ನನ್ನನ್ನು ನಂಬುತ್ತೀರ?

Ich ging zum Dorfrat, um die Arbeit, für die ich gekommen war, zu erledigen und kam dann zurück zu Shamannas Haus. Ich blieb bei ihm bis zum Abend und machte mich dann auf den Weg zu meinem Dorf.

Auf dem Rückweg sehnte ich mich danach, noch einmal das Haus im Hain zu besuchen. Ich unterdrückte den Wunsch und vermied, dahin zu gehen.

Auf dem Rückweg traf ich einen Freund und erzählte ihm von den Ereignissen, die ich im Spukhaus im Mangohain erlebt hatte.

Er stand eine Weile schweigend da und dann lachte er laut und sagte: „Wem erzählst du das alles? Du spinnst wohl. Vielleicht hast du einen Albtraum gehabt.“

Was kann man einem sagen, der nicht glaubt?

Egal, aber hätten Sie mir geglaubt, was ich erzählt habe?Thanks a lot to Ms Mythri B. for arranging the Kannada and German texts in columns and rows.


Herzlichen Dank an Dr. M.P. Rajendra für diese Übersetzung, in der er die Kreativität seines Vaters weiter erhalten hat. Ein besonderer Dank gilt auch Frau Dagmar Brech für die Verfeinerung der Übersetzung nach dem deutschen Klang.